ಸದಾ ವಿವಾದಾತ್ಮಕ ಸ್ಟೇಟ್ಮೆಂಟ್ ಗಳನ್ನು ಕೊಡೋ ಮೂಲಕವೇ ಸುದ್ದಿಯಲ್ಲಿರೋ ನಟಿ ರಾಖಿ ಸಾವಂತ್ ಇದೀಗ ‘ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಮದುವೆಯೇ ಆಗಿಲ್ಲ ಅಂತ ಹೇಳಿದ್ದಾರೆ..!
ಇತ್ತೀಚೆಷ್ಟೇ ಇಟಲಿಯಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಮದುವೆ ನಡೆದಿತ್ತು. ಬೆಂಗಳೂರಲ್ಲಿ ರಿಸಪ್ಷನ್ ಕೂಡ ನಡೆದಿದ್ದು ಎಲ್ರಿಗೂ ಗೊತ್ತಿರೋ ವಿಷಯವೇ. ಆದ್ರೆ ರಾಖಿ ಸಾವಂತ್ ದೀಪಿಕಾ- ರಣವೀರ್ ಮದುವೆಯೇ ಆಗಿಲ್ಲ ಅಂತಿದ್ದಾರೆ.
ರಾಖಿ ಸಾವಂತ್ ಹೀಗಂದಿರೋ ವಿಡಿಯೋ ವೈರಲ್ ಆಗಿದೆ. ”ನಂಗೆ ನಿಜವಾಗಲೂ ಏನೂ ಅರ್ಥ ಆಗ್ತಿಲ್ಲ. ನೀವು ನಿಜವಾಗಿಯೂ ಮದ್ವೆ ಆಗಿದ್ದೀರಾ..? ಸತ್ಯ ಹೇಳಿ. ಸಬ್ಯಸಾಚಿಯ ಸೂಟಿಂಗ್ಸ್ ಮತ್ತು ಸೀರೆ ಜಾಹಿರಾತಿಗೋಸ್ಕರ ಫೋಟೋ ಶೂಟ್ ಮಾಡಿಸಿದ್ದೀರಿ ಅಂತ ಅನಿಸ್ತಿದೆ. ನೀವಿಬ್ರೂ ಒಳ್ಳೆಯ ಜೋಡಿ. ಆದ್ರೆ. ನಿಜವಾಗಿಯೂ ಮದ್ವೆ ಆಗಿದ್ದೀರಾ ಹೇಳಿ”ಅಂತ ರಾಖಿ ದೀಪಿಕಾ ಮತ್ತು ರಣವೀರ್ ಗೆ ಪ್ರಶ್ನೆ ಮಾಡಿದ್ದಾರೆ.
https://www.instagram.com/p/BqckBUMB2sB/?utm_source=ig_embed
https://www.instagram.com/p/BqdLVUQBs1N/?utm_source=ig_embed