ಸಮ್ಮಿಶ್ರ ಸರ್ಕಾರ ಪಿಯುಸಿ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಇನ್ಮುಂದೆ ಕಾಲೇಜಿನಲ್ಲಿ ಮೊಬೈಲ್, ಲ್ಯಾಪ್ ಟಾಪ್ ಬಳಸೋ ಹಾಗಿಲ್ಲ ಅಂತ ಪಿಯುಸಿ ಬೋರ್ಡ್ ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರಿ, ಅನುದಾನಿತ, ಖಾಸಗಿ ಕಾಲೇಜುಗಳಲ್ಲಿ ಮೊಬೈಲ್ ಮತ್ತು ಲ್ಯಾಪ್ ಟಾಪ್ ಬಳಸುವಂತಿಲ್ಲ ಅಂತ ಪಿಯು ಬೋರ್ಡ್ ಆದೇಶ ನೀಡಿದ್ದು, ವಿವಾದಕ್ಕೀಡಾಗಿದೆ.
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ಪಿಯು ಕಾಲೇಜುಗಳಲ್ಲಿ ಮೊಬೈಲ್ ಮತ್ತು ಲ್ಯಾಪ್ ಟಾಪ್ ಬ್ಯಾನ್ ಮಾಡುವಂತೆ ಎಲ್ಲಾ ಉಪನಿರ್ದೇಶಕರಿಗೆ ಪಿಯು ಬೋರ್ಡ್ ಸುತ್ತೋಲೆ ಹೊರಡಿಸಿದೆ. ಇದರೊಂದಿಗೆ ಮೈತ್ರಿ ಸರ್ಕಾರ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ.
ಸರ್ಕಾರವೇ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡ್ತಿದೆ. ಮೊಬೈಲ್ ಬ್ಯಾನ್ ಓಕೆ ಆದರೆ, ಲ್ಯಾಪ್ ಟಾಪ್ ಬ್ಯಾನ್ ಯಾಕೆ..? ಹಾಗೆಯೇ ಕಾಮರ್ಸ್, ಸೈನ್ಸ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅತ್ಯವಶ್ಯಕವಾಗಿದೆ ಅಂತ ಗೊತ್ತಿದ್ದರೂ ಸರ್ಕಾರ ಲ್ಯಾಪ್ ಟಾಪ್ ಬ್ಯಾನ್ ನಿರ್ಧಾರ ತಗೊಂಡಿದ್ದು ಏಕೆ ಅನ್ನೋದು ಪ್ರಶ್ನೆ.
ಕಾಲೇಜಿನಲ್ಲಿ ಮೊಬೈಲ್, ಲ್ಯಾಪ್ ಟಾಪ್ ಬ್ಯಾನ್..!
TRENDING ARTICLES