ಮಹಿಳಾ ಟಿ-20 ವರ್ಲ್ಡ್ ಕಪ್ ನ 2ನೇ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ಇಂಡಿಯಾ ಮುಗ್ಗರಿಸಿದೆ. ಪಂದ್ಯದಲ್ಲಿ 8 ವಿಕೆಟ್ ಗಳ ಜಯ ಸಾಧಿಸಿದ ಇಂಗ್ಲೆಂಡ್ ಫೈನಲ್ ಗೆ ಲಗ್ಗೆ ಇಟ್ಟಿದೆ. ಇದ್ರೊಂದಿಗೆ ಟೀಮ್ ಇಂಡಿಯಾದ ವರ್ಲ್ಡ್ ಕಪ್ ಕನಸು ಭಗ್ನವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್ ಪ್ರೀತ್ ಕೌರ್ ಪಡೆ ಹೀತರ್ ನೈಟ್ ಬಳಗದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿತು. ಬ್ಯಾಟ್ಸ್ ವುಮೆನ್ಸ್ ಒಬ್ಬರ ಹಿಂದೊಬ್ಬರು ಪೆವಿಲಿಯನ್ ಪೆರೇಡ್ ಮಾಡಿದ್ರು. ಪರಿಣಾಮವಾಗಿ 19.3 ಓವರ್ ಗಳಲ್ಲಿ 112 ರನ್ ಗಳಿಗೆ ಭಾರತದ ಇನ್ನಿಂಗ್ಸ್ ಅಂತ್ಯವಾಯಿತು.
113 ರನ್ ಗಳನ್ನು ಬೆನ್ನತ್ತಿದ ಇಂಗ್ಲೆಂಡ್ ಪಡೆ 17.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ನಿರಾಯಾಸವಾಗಿ ಗುರಿ ತಲುಪಿತು. ಆರಂಭಿಕ ಆಘಾತ ಎದುರಿಸಿದ್ದ ಆಂಗ್ಲ ಪಡೆ ವಿಕೆಟ್ ಕೀಪರ್ ಆ್ಯಮಿ ಎಲೆನ್ ಜಾನ್ಸ್ ಹಾಗೂ ನತಾಲೀ ಸೀವರ್ ಅರ್ಧಶತಕಗಳ ನೆರವಿನಿಂದ 8 ವಿಕೆಟ್ ಜಯ ಸಾಧಿಸಿತು.
ಫೈನಲ್ ನವೆಂಬರ್ 24ರಂದು ನಡೆಯಲಿದ್ದು, ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧ ವಿಶ್ವ ಚಾಂಪಿಯನ್ ಪಟ್ಟಕ್ಕೆ ಸೆಣಸಲಿದೆ.