ಎಚ್ ಡಿ ಕುಮಾರಸ್ವಾಮಿ ಅವರು ಆರು ತಿಂಗಳು ಇರೋದೇ ಸಾಧನೆ ಅಂತ ಅಂದುಕೊಂಡಿದ್ದಾರೆ ಅಂತ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತಾಡಿದ ಅವರು, ರೈತರ ಆತ್ಮಹತ್ಯೆಗೆ ಮುಖ್ಯಮಂತ್ರಿಯೇ ಹೊಣೆ.
ಸಾಂದರ್ಭಿಕ ಕೂಸಿಗೆ ಯಾವುದೇ ಗೊತ್ತುಗುರಿ ಇಲ್ಲ. ಸರ್ಕಾರದ ಮೇಲೆ ಸಿಎಂಗೆ ಹಿಡಿತವೇ ಇಲ್ಲ. ಅವರು ಅರ್ಧ ದಿನ ದೇವಸ್ಥಾನ, ಅರ್ಧ ದಿನ ಐಷಾರಾಮಿ ಹೋಟೆಲ್ ನಲ್ಲಿ ಕುಳಿತು ವ್ಯವಹಾರ ಮಾಡ್ತಾರೆ. ಇದನ್ನೇ ಸಾಧನೆ ಅಂತೇಳುವುದು ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ. ಮಾತೆತ್ತಿದ್ದರೆ ರಾಜೀನಾಮೆ ಬಿಸಾಕ್ತೀನಿ ಅಂತಾರೆ. ಇದು ಕೂಡ ರಾಜ್ಯದ ಜನತೆಗೆ ಮಾಡುತ್ತಿರುವ ಅವಮಾನ ಅಂತ ಬಿಎಸ್ ವೈ ಟೀಕೆಗಳ ಸುರಿಮಳೆಗೈದರು.
ರೈತ ಮಹಿಳೆಯ ಬಗ್ಗೆ ಹಗುರವಾಗಿ ಮಾತಾಡ್ತಾರೆ. ರೈತರನ್ನ ಹಿಂಡಲಗಾ, ಬಳ್ಳಾರಿ ಜೈಲಿಗೆ ಕಳುಹಿಸಿ ಅಂತಾ ಸಹನೆ ಕಳೆದುಕೊಂಡು ಸಿಎಂ ಹೇಳ್ತಿದ್ದಾರೆ. ಸಾಲಮನ್ನಾ ಮಾಡಿಲ್ಲ, 6 ತಿಂಗಳ ಸಾಧನೆ ಏನು ಅನ್ನೋದ್ರ ಬಗ್ಗೆ ಶ್ವೇತಪತ್ರ ಹೊರಡಿಸಲಿ. ವಿರೋಧ ಪಕ್ಷ, ಮಾಧ್ಯಮದವರು ಅವರ ತಾಳಕ್ಕೆ ತಕ್ಕಂತೆ ಇರಬೇಕಂತ ತಿಳ್ಕೊಂಡಿದ್ದಾರೆ ಎಂದು ಬಿಎಸ್ ವೈ ಎಚ್ ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ.