ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ರೈತರ ಜೊತೆ ಮಾತ್ರವಲ್ಲ ಪೌರಕಾರ್ಮಿಕರ ಜೊತೆಗೂ ಇದ್ದಾರೆ. ಇತ್ತೀಚೆಗಷ್ಟೇ ರೈತರ ಸಾಲ ತೀರಿಸಿದ್ದ ಬಿಗ್ ಬಿ ಈಗ ಪೌರ ಕಾರ್ಮಿಕರಿಗೆ ನೆರವಾಗಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶದ 1,398 ರೈತರ ಸುಮಾರು 4 ಕೋಟಿ ರೂ ಸಾಲವನ್ನು ಅಮಿತಾಬ್ ಬಚ್ಚನ್ ತೀರಿಸಿದ್ರು. ಇದಕ್ಕೂ ಹಿಂದೆ ಸಂಕಷ್ಟದಲ್ಲಿದ್ದ ಮಹಾರಾಷ್ಟ್ರದ 350 ರೈತರ ಸಾಲವನ್ನು ತೀರಿಸಿದ್ದ ಅಮಿತಾ ಬಚ್ಚನ್, ಇದೀಗ ಪೌರಕಾರ್ಮಿಕರ ಸಹಾಯಕ್ಕೆ ನಿಂತಿದ್ದಾರೆ.
ಪೌರಕಾರ್ಮಿಕರ ಜೀವನ ಸುರಕ್ಷಿತವಾಗಿಡಲು 50 ಮ್ಯಾನ್ ಹೋಲ್ ಸ್ವಚ್ಛಗೊಳಿಸೋ ಯಂತ್ರಗಳನ್ನು ನೀಡಲು ಮುಂದಾಗಿದ್ದಾರೆ. ‘ಮ್ಯಾನ್ ಹೋಲ್ ಕ್ಲೀನ್ ಮಾಡೋ ವೇಳೆ ಅನೇಕ ಮಂದಿ ಪೌರಕಾರ್ಮಿಕರು ಸಾವನ್ನಪ್ಪಿದ್ದಾರೆ. ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಅವರು ಸಾಮಾನ್ಯ ವಸ್ತುಗಳನ್ನು ಬಳಸ್ತಾರೆ. ಆದ್ರಿಂದ ಹೆಚ್ಚಿನ ರಕ್ಷಣೆ ಹಾಗೂ ಆಧುನಿಕ ಯಂತ್ರಗಳ ಅಗತ್ಯವಿದೆ ಅಂತ ಬ್ಲಾಗ್ ನಲ್ಲಿ ಬರೆದುಕೊಂಡಿರೋ ಅಮಿತಾಬ್ 50 ಮ್ಯಾನ್ ಹೋಲ್ ಸ್ವಚ್ಛಗೊಳಿಸೋ ಯಂತ್ರಗಳನ್ನು ಕೊಡಿಸುವುದಾಗಿ ತಿಳಿಸಿದ್ದಾರೆ.
ರೈತರಷ್ಟೇ ಅಲ್ಲ ಪೌರಕಾರ್ಮಿಕರ ಜೊತೆಗೂ ಇದ್ದಾರೆ ಅಮಿತಾಬ್..!
TRENDING ARTICLES