Wednesday, September 18, 2024

ಹಿಟ್ ಮ್ಯಾನ್​ ರೋಹಿತ್ ಕಾಂಗರೂ ನಾಡಿನಲ್ಲೀಗ ಕ್ಯಾಮೆರಾಮನ್…!

ವರ್ಷಗಳು ಬದಲಾದಂತೆ ವಿಶ್ವ ಕ್ರಿಕೆಟ್​ ಹಲವು ವಿಭಿನ್ನ ಆರಂಭಿಕ ಆಟಗಾರರನ್ನ ಕಂಡಿದೆ. ಅದರಲ್ಲೂ ಮ್ಯಾಥ್ಯೂ ಹೆಡನ್​, ವಿರೇಂದ್ರ ಸೆಹ್ವಾಗ್​, ಸಯೀದ್​ ಅನ್ವರ್​ ಮೊದಲಾದ ಬ್ಯಾಟ್ಸ್ ಮನ್ ಗಳು ತಮ್ಮ ಹೊಡಿಬಡಿ ಶೈಲಿಯಿಂದಲೇ ಅಭಿಮಾನಿಗಳ ಪ್ರೀತಿಗೆ ಪಾತ್ರರಾದವ್ರು. ಇಂದಿನ ಮಾರ್ಡನ್​ ಕ್ರಿಕೆಟ್​ನಲ್ಲಿ ಟೀಮ್​ಇಂಡಿಯಾದ ಆರಂಭಿಕ ಆಟಗಾರ ರೋಹಿತ್​ ಶರ್ಮಾ ಆ ಸ್ಥಾನವನ್ನ ತುಂಬಿದ್ದಾರೆ.
ಓಪನರ್ ಬ್ಯಾಟಿಂಗ್ ಜವಬ್ದಾರಿಯೊಂದಿಗೆ ಖಾಯಂ ನಾಯಕ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಮ್​ಇಂಡಿಯಾದ ನಾಯಕತ್ವವನ್ನೂ ರೋಹಿತ್​ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸದ್ಯ ಆಸೀಸ್​ ಸರಣಿಗಾಗಿ ಬ್ಲ್ಯೂ ಬಾಯ್ಸ್​​ ಕಾಂಗರೂ ನಾಡಿನಲ್ಲಿ ಬೀಡು ಬಿಟ್ಟಿರೋದು ನಿಮೆಗೆಲ್ಲಾ ಗೊತ್ತೇ ಇದೆ. ಇಂಟ್ರೆಸ್ಟಿಂಗ್ ಅಂದ್ರೆ ಅಲ್ಲಿ ರೋಹಿತ್​ ಶರ್ಮಾ ಬ್ಯಾಟ್​ ಜೊತೆಗೆ ಕ್ಯಾಮರಾ ಕೂಡ ಹಿಡಿದಿದ್ದಾರೆ..!

ಯಸ್​…! ಸದ್ಯ ಆಸ್ಟ್ರೇಲಿಯಾ ಸರಣಿಯ ಬ್ಯುಸಿ ಶೆಡ್ಯೂಲ್​ನಲ್ಲಿರೋ ಟೀಮ್​ಇಂಡಿಯಾ ಮೊದಲ ಟಿ-20 ಪಂದ್ಯಕ್ಕೂ ಮುನ್ನ ಪೋಟೋಶೂಟ್ ನಡೆಸಿತ್ತು. ಆ ಸಂದರ್ಭದಲ್ಲಿ ಕ್ಯಾಮೆರಾ ಹಿಡಿದ ಹಿಟ್​ಮ್ಯಾನ್​ ರೋಹಿತ್​ ಶರ್ಮಾ, ಕನ್ನಡಿಗ ಮನೀಷ್​ ಪಾಂಡೆಯವರ ಪೋಟೋಶೂಟ್ ನಡೆಸಿದ್ದಾರೆ. ರೋಹಿತ್​ ತಮ್ಮ ಮೊಬೈಲ್​ನಲ್ಲಿ ಮನೀಷ್​ ಪಾಂಡೆಯ ಪೋಟೋಶೂಟ್​ ಮಾಡುತ್ತಿರುವ ವಿಡಿಯೋ ತುಣುಕನ್ನ ಬಿಸಿಸಿಐ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.​

 

 

RELATED ARTICLES

Related Articles

TRENDING ARTICLES