Friday, July 19, 2024

ಆಸ್ಟ್ರೇಲಿಯಾದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ ಮಾಡಿದ ರಾಷ್ಟ್ರಪತಿ..!

ಪರಾಮಟ್ಟ : ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಸ್ಟ್ರೇಲಿಯಾದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ.
ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಅವರು ಪರಾಮಟ್ಟದ ಜುಬಿಲಿ ಪಾರ್ಕ್ ನಲ್ಲಿ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಯನ್ನು ಅನಾವರಣ ಮಾಡಿದ್ರು. ಈ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೊರಿನ್ ಸನ್ ಮತ್ತು ಪಾರಮಟ್ಟ ಮೇಯರ್ ಆ್ಯಂಡ್ರೀವ್ ವಿಲ್ಸ್ ನ್ ಭಾಗವಹಿಸಿದ್ರು.
ಇದೇ ವೇಳೆ ಕೋವಿಂದ್ ಅವರು ಗಾಂಧೀಜಿ ಅವರ ‘ಹಿಂದ್ ಸ್ವರಾಜ್’ ಪುಸ್ತಕವನ್ನು ಪ್ರಧಾನಿ ಸ್ಕಾಟ್ ಮೊರಿನ್ ಸನ್ ಮತ್ತು ಮೇಯರ್ ಆ್ಯಂಡ್ರೀವ್ ವಿಲ್ಸನ್ ಅವರಿಗೆ ನೀಡಿದ್ರು. ಗಾಂಧೀಜಿ ಅವರ 150ನೇ ಜನ್ಮಶತಮಾನೋತ್ಸವದ ಪ್ರಯುಕ್ತ ಭಾರತ ಸರ್ಕಾರ ಆಸ್ಟ್ರೇಲಿಯಾಕ್ಕೆ ಕೊಡುಗೆ ರೂಪದಲ್ಲಿ ಗಾಂಧೀಜಿ ಪ್ರತಿಮೆಯನ್ನು ನೀಡಿದೆ. ಈ ಪ್ರತಿಮೆಯನ್ನು ನಿರ್ಮಿಸಿರೋದು ಭಾರತ ಮೂಲದ ಶಿಲ್ಪಿಗಳಾದ ರಾಮ್ ಮತ್ತು ಅನಿಲ್.

RELATED ARTICLES

Related Articles

TRENDING ARTICLES