ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮಾಧ್ಯಮಗಳ ಮೇಲೆ ಮತ್ತೆ ಸಿಡಿಮಿಡಿಗೊಂಡಿದ್ದಾರೆ. ”ನಾನು ಇನ್ಮುಂದೆ ಯಾವುದೇ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವುದಿಲ್ಲ. ಏನು ಬೇಕಾದ್ರೂ ಬರೆದುಕೊಳ್ಳಿ” ಅಂದಿದ್ದಾರೆ ಮುಖ್ಯಮಂತ್ರಿಗಳು.
ಬಡವರ ಬಂಧು ಯೋಜನೆ ಜಾರಿ ಸಮಾರಂಭದಲ್ಲಿ ಬಹಿರಂಗವಾಗಿಯೇ ಸಿಎಂ ಹೀಗೆ ಹೇಳಿದ್ದಾರೆ. ಅಷ್ಟೇಅಲ್ಲದೆ ಗೃಹ ಕಚೇರಿ ಕೃಷ್ಣಗೆ ಮಾಧ್ಯಮದವರ ಪ್ರವೇಶವನ್ನೂ ಕುಮಾರಸ್ವಾಮಿ ಅವರು ನಿರಾಕರಿಸಿದ್ದಾರೆ.
ಗೃಹಕಚೇರಿ ಒಳಗೆ ಮಾಧ್ಯಮದವರನ್ನು ಬಿಡದಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಗೇಟ್ ಒಳಗೆ ಬರಲಿ, ಗೃಹ ಕಚೇರಿ ಒಳಗೆ ಮಾಧ್ಯಮದವರನ್ನು ಬಿಡ್ಬೇಡಿ ಅಂತ ಪೊಲೀಸರಿಗೆ ಸೂಚನೆ ನೀಡಿದ್ದಾರಂತೆ ಮಾನ್ಯ ಮುಖ್ಯಮಂತ್ರಿಗಳು..!