Monday, April 22, 2024

4ಕೋಟಿ ರೂ ಸಾಲ ತೀರಿಸಿ ರೈತರಿಗೆ ನೆರವಾದ ಬಿಗ್ ಬಿ..!

ಬಾಲಿವುಡ್ ಹಿರಿಯ ನಟ, ಬಿಗ್ ಬಿ ಖ್ಯಾತಿಯ ಅಮಿತಾಬ್ ಬಚ್ಚನ್ ಅವರಿಗೆ ರೈತರ ಮೇಲೆ ಅಪಾರ ಕಾಳಜಿ, ಪ್ರೀತಿ, ಗೌರವ ಇದೆ. ಅನ್ನದಾತರ ಕಷ್ಟಗಳಿಗೆ ಅಮಿತಾಬ್ ಸ್ಪಂದಿಸುತ್ತಿರುತ್ತಾರೆ. ಈ ಹಿಂದೆ ಸಂಕಷ್ಟದಲ್ಲಿದ್ದ ಮಹಾರಾಷ್ಟ್ರದ 350 ರೈತರ ಸಾಲವನ್ನು ತೀರಿಸಿದ್ದ ಅಮಿತಾ ಬಚ್ಚನ್, ಇದೀಗ ಉತ್ತರ ಪ್ರದೇಶದ ರೈತರಿಗೆ ನೆರವಾಗಿದ್ದಾರೆ. ಉತ್ತರ ಪ್ರದೇಶದ 1,398 ರೈತರ ಸುಮಾರು 4 ಕೋಟಿ ರೂ ಸಾಲವನ್ನು ಅಮಿತಾಬ್ ಬಚ್ಚನ್ ತೀರಿಸಿದ್ದಾರೆ. ಈ ವಿಷಯವನ್ನು ತಮ್ಮ ಬ್ಲಾಗ್ ನಲ್ಲಿ ತಿಳಿಸಿರುವ ಅಮಿತಾಬ್ ಬಚ್ಚನ್, ರೈತರ ಸಾಲ ಪಾವತಿಸಿದ್ದು ನಂಗೆ ತೃಪ್ತಿ ತಂದಿದೆ. ರಾಷ್ಟ್ರಕ್ಕಾಗಿ ತ್ಯಾಗ ಮಾಡೋ ರೈತರಿಗೆ ನೆರವು ನೀಡುವುದು ನಮ್ಮೆಲ್ಲರ ಕರ್ತವ್ಯ ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES