Friday, July 19, 2024

ಗಾಂಜಾ ಸೇದಿದ್ರೆ ಮುಕ್ತಿ ಎಂದ ನಿತ್ಯಾನಂದ ಸ್ವಾಮಿಗೆ ನೊಟೀಸ್..!

‘ಗಾಂಜಾ ಸೇವನೆಯಿಂದ ಮುಕ್ತಿ ಸಿಗುತ್ತದೆ’ ಅಂತ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ನಿತ್ಯಾನಂದ ಸ್ವಾಮಿಗೆ ಸಿಸಿಬಿ ನೊಟೀಸ್ ಜಾರಿ ಮಾಡಿದೆ. ಗಾಂಜಾ ಸೇವನೆಯಿಂದ ಆಕಾಶದಲ್ಲಿ ತೇಲಬಹುದು, ಇದರಿಂದ ಮುಕ್ತಿ ಸಿಗುತ್ತದೆ ಅಂತ ನಿತ್ಯಾನಂದ ಸ್ವಾಮಿ ಭಾಷಣವೊಂದರಲ್ಲಿ ಹೇಳಿದ್ದರು. ಸೋಶಿಯಲ್ ಮೀಡಿಯಾ ಮೂಲಕ ಗಾಂಜಾ ಸೇವನೆಗೆ ಪ್ರಚೋದನೆ ನೀಡಿದ್ದಾರೆ ಅಂತ ಸಾರ್ವಜನಿಕರು ಈ ಬಗ್ಗೆ ದೂರು ಕೊಟ್ಟಿದ್ದರು. ದೂರಿನ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಇಂದು ಬಿಡದಿ ಆಶ್ರಮಕ್ಕೆ ತೆರಳಿ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ. ನಿತ್ಯಾನಂದ ಸ್ವಾಮೀಜಿ ಮಠದಲ್ಲಿ ಇರದ ಹಿನ್ನೆಲೆಯಲ್ಲಿ ಅವರ ಶಿಷ್ಯರು ನೊಟೀಸ್ ಸ್ವೀಕರಿಸಿದ್ದಾರೆ.

RELATED ARTICLES

Related Articles

TRENDING ARTICLES