Saturday, July 27, 2024

ಮದುವೆ ಮಂಟಪದಿಂದ ನೇರವಾಗಿ ಎಕ್ಸಾಂ ಹಾಲ್ ಗೆ ಹೋದ ವಧು..!

ಹಸಮಣೆ ಏರಿದ ಕೆಲವೇ ಹೊತ್ತಿನಲ್ಲೇ ವಧು ಪರೀಕ್ಷೆ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಪತ್ನಿಗೆ ಸಂಪೂರ್ಣ ಸಾಥ್ ನೀಡಿರೋ ವರ, ಮದುವೆ ಜೊತೆಗೆ ಭವಿಷ್ಯವೂ ಮುಖ್ಯ ಹಾಗಾಗಿ ಆಕೆಯ ಇಚ್ಛೆಯಂತೆ ಪರೀಕ್ಷೆ ಬರೆಸಿದ್ದೇನೆ ಅಂತ ಹೇಳಿದ್ದಾರೆ.

ಇಂದು ಅರಸೀಕೆರೆ ತಾಲೂಕು ಗಂಡಸಿ ನಿವಾಸಿ ನವೀನ್ ಮತ್ತು ಹಾಸನದ ಜಯನಗರ ಬಡಾವಣೆಯ ಶ್ವೇತಾ ಅವ್ರ ಮದ್ವೆ ಹಾಸನದಲ್ಲಿ ನೆರವೇರಿತು. ಬೆಳಗ್ಗೆ 7.45 ರಿಂದ 8.45 ರ ವರೆಗಿನ ಲಗ್ನದಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ತಮ್ಮ ಮದುವೆಯನ್ನು ಸ್ಮರಣೀಯವಾಗಿಸಿಕೊಳ್ಳೋ ಒಂದೊಳ್ಳೆ ಕೆಲಸ ಮಾಡಿದ್ರು.

ಮದುವೆಯಾದ ಕೆಲವೇ ಹೊತ್ತಿನಲ್ಲಿ ಶ್ವೇತಾ ಬಿಕಾಂ ಅಂತಿಮ ವರ್ಷದ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆದಳು. ಇಬ್ಬರ ನಡುವೆ ಕಳೆದ ಮೇ 6 ರಂದೇ ನಿಶ್ಚಿತಾರ್ಥವಾಗಿತ್ತು. ಅದಾದ ಬಳಿಕ ಮದುವೆ ಪರೀಕ್ಷೆ ನಿಗದಿಯಾದ್ದರಿಂದ ನವೆಂಬರ್ 18 ರಂದು ಮನೆಯವರು ಮದುವೆ ನಿಶ್ಚಯ ಮಾಡಿದ್ದರು. ಆದ್ರೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಪರೀಕ್ಷೆ ಇಂದಿಗೆ ಮುಂದೂಡಿತ್ತು.

ಮದುವೆ ಶಾಸ್ತ್ರಗಳನ್ನು ಬೇಗ ಬೇಗ ಮುಗಿಸಿದ ಮನೆಯವರು, ಪುರೋಹಿತರು ಶ್ವೇತಾ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟರು. ಎಲ್ಲರ ಸಹಕಾರದಿಂದ ಹಾಸನದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪರೀಕ್ಷೆ ಬರೆದ ಶ್ವೇತಾ, ಒಂದು ವರ್ಷ ವ್ಯರ್ಥವಾಗಬಾರದು ಅಂತ  ನಿದ್ರೆ ಇಲ್ಲದೆಯೂ ಪರೀಕ್ಷೆ ಬರೆದಿದ್ದೇನೆ. ತುಂಬಾ ಸುಲಭ ಇತ್ತು. ಮದುವೆ ದಿನವೇ ಪರೀಕ್ಷೆ ಬರುತ್ತೆ ಅಂದುಕೊಂಡಿರಲಿಲ್ಲ. ಹೊಸ ಅನುಭವ ತುಂಬಾ ಚೆನ್ನಾಗಿತ್ತು. ಪಾಸಾಗುವ ಮಟ್ಟಕ್ಕೆ ಪರೀಕ್ಷೆ ಬರೆದಿದ್ದೇನೆ. ಡಿಸ್ಟಿಂಕ್ಷನ್ ಬರುವ ನನಗೆ ಪಾಸಾಗುವ ವಿಶ್ವಾಸವಿದೆ ಅಂತ ಹೇಳಿದ್ರು.

 ನನಗೆ ಸಹಕಾರ ನೀಡಿದ ಪತಿ ಸೇರಿ ಎಲ್ಲರಿಗೂ ಶ್ವೇತಾ ಥ್ಯಾಂಕ್ಸ್ ಹೇಳೋದನ್ನು ಮರೆಯಲಿಲ್ಲ. ಹಾಗೆಯೇ ಪತ್ನಿಯನ್ನು ಪರೀಕ್ಷಾ ಕೇಂದ್ರಕ್ಕೆ ತಂದು ಬಿಟ್ಟು, ಆಕೆ ಹೊರ ಬರುವವರೆಗೂ ಹೊರಗಡೆ ಕಾದು ಕುಳಿತಿದ್ದ ವರ ನವೀನ್ ಸಹ, ಬಿಕಾಂ ಮುಗಿದ ಕೂಡಲೇ ಎಂಕಾಂ ಓದಿಸುತ್ತೇನೆ. ಇದು ಒಂದೆಡೆ ಖುಷಿ ಮತ್ತೊಂದೆಡೆ ನೆಂಟರಿಷ್ಟರು ಏನೆಂದುಕೊಳ್ತಾರೋ ಅನ್ನೋ ಅಳುಕಿದೆ. ಆದ್ರೂ ಭವಿಷ್ಯದ ಹಿತದೃಷ್ಟಿ ಜೊತೆಗೆ ಆಕೆ ಚೆನ್ನಾಗಿ ಓದುವ ಕಾರಣಕ್ಕೆ ಪರೀಕ್ಷೆ ಬರೆಸಿದ್ದೇನೆ ಅಂದ್ರು. .

RELATED ARTICLES

Related Articles

TRENDING ARTICLES