ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಡೈರೆಕ್ಟರ್ ಪ್ರೇಮ್ ವಿರುದ್ಧ ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಾಗಿದೆ.
‘ದಿ ವಿಲನ್’ ಸಿನಿಮಾದಲ್ಲಿನ ದೃಶ್ಯ ವಿರೋಧಿಸಿ ಕರ್ನಾಟಕ ಸಂಘಟನೆ ಒಕ್ಕೂಟದ ಪ್ರೆಸಿಡೆಂಟ್ ನಾಗೇಶ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಚಿತ್ರದಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಮಾಡಲಾಗಿದೆ ಅನ್ನೋದು ನಾಗೇಶ್ ಅವ್ರ ಆರೋಪ.
ದಿ ವಿಲನ್ ಸಿನಿಮಾದಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಮಾಡಲಾಗಿದೆ. ಸುದೀಪ್ ಸೊಂಟಕ್ಕೆ ಕನ್ನಡ ಬಾವುಟ ಸುತ್ತಿಕೊಳ್ತಾರೆ ಅಂತ ನಾಗೇಶ್ ಸುದೀಪ್ ಮತ್ತು ಪ್ರೇಮ್ ವಿರುದ್ಧ ಫಿಲ್ಮ್ ಚೇಂಬರ್ ನಲ್ಲಿ ಕಂಪ್ಲೇಂಟ್ ನೀಡಿದ್ದಾರೆ. ಸುದೀಪ್ ಮತ್ತು ಪ್ರೇಮ್ ಕ್ಷಮೆ ಕೇಳ್ಬೇಕು. ಇಲ್ದೇ ಇದ್ರೆ ಮುಂದಿನ ದಿನಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಬಿಡಲ್ಲ ಅಂತ ಸಂಘಟನೆ ಹೇಳಿದೆ.
ಸುದೀಪ್- ಪ್ರೇಮ್ ವಿರುದ್ಧ ಕಂಪ್ಲೇಂಟ್..!
TRENDING ARTICLES