ಟಿಪ್ಪು ಸುಲ್ತಾನ್ ನಿಂದ ನಮ್ಮ ಫ್ಯಾಮಿಲಿಗೆ ತೊಂದರೆಯಾಗಿದೆ. ಆದ್ರೆ, ಯಾವ ಆಧಾರದ ಮೇಲೆ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದೆ ಅನ್ನೋದು ತಿಳಿಯುತ್ತಿಲ್ಲ ಅಂತ ರಾಜಮಾತೆ ಪ್ರಮೋದಾದೇವಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಟಿಪ್ಪು ಸಲ್ತಾನ್ ನಿಂದ ನಮ್ಮ ಕುಟುಂಬಕ್ಕೆ ತೊಂದ್ರೆ ಆಗಿತ್ತು. ಆದ್ರೂ ಸರ್ಕಾರ ಟಿಪ್ಪು ಜಯಂತಿ ಆಚರಿಸ್ತಿದೆ. ಇದಕ್ಕೆ ಕಾರಣ ಏನು ಅಂತ ಗೊತ್ತಾಗ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು. ನಮ್ಮ ಪೂರ್ವಜರು ನಮ್ಮ ಕುಟುಂಬಕ್ಕೆ ತೊಂದ್ರೆ ನೀಡಿದವ್ರಿಂದ ದೂರ ಇರುವಂತೆ ಕಿವಿಮಾತು ಹೇಳಿದ್ದಾರೆ. ಆದ್ರಿಂದ ಅದರ ಬಗ್ಗೆ ಹೆಚ್ಚಿಗೆ ಮಾತನಾಡಲಾರೆ ಅಂತ ಹೇಳಿದ್ರು.
ರಾಜಕಾರಣಕ್ಕೆ ಎಂಟ್ರಿ ಕೊಡಲ್ಲ :
ಇನ್ನು ರಾಜಕಾರಣಕ್ಕೆ ಬರೋ ಬಗ್ಗೆ ಪ್ರತಿಕ್ರಿಯಿಸಿದ ಪ್ರಮೋದಾ ದೇವಿ, ”ಜನ ಕಲ್ಯಾಣಕ್ಕೆ ರಾಜಕಾರಣ ಅನಿವಾರ್ಯವಲ್ಲ. ರಾಜಕಾರಣದಿಂದ ದೂರ ಉಳಿದು ಜನಕಲ್ಯಾಣ ಮಾಡಬಹುದು ಅಂತ ಹೇಳಿದ್ದಾರೆ.
ಬೆಳಗಾವಿ ಕೆ.ಎಲ್.ಇ ಆಸ್ಪತ್ರೆಯ ಪಿಜಿಯೋಥೆರಪಿ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಗೆ ಯಾವ ಕಾರಣಕ್ಕೂ ನಾನು ಸ್ಪರ್ಧಿಸುವುದಿಲ್ಲ. ಎಲ್ಲ ಪಕ್ಷದವರು ಹದಿನೈದು ವರ್ಷಗಳಿಂದ ಚುನಾವಣೆ ಸಮೀಪಿಸಿದಾಗ ಸಂಪರ್ಕಿಸುತ್ತಾರೆ. ಚುನಾವಣೆಗೆ ಸ್ಪರ್ದಿಸಲು ಇಚ್ಚೆ ಇದೆಯಾ ಎಂದು ಕೇಳ್ತಾರೆ. ಆದರೆ, ನಾನು ಮಾತ್ರ ಚುನಾವಣೆಗೆ ಸ್ಪರ್ದಿಸುವುದಿಲ್ಲ ಅಂತ ಸ್ಪಷ್ಟಪಡಿಸಿದ್ರು.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರವಾಗಿ ಮಾತನಾಡಿದ ಅವರು, ಅವರ ನಂಬಿಕೆಗೆ ಬಿಟ್ಟಿದ್ದು ಮಹಿಳೆಯರಿಗೆ ಸ್ಥಾನ-ಮಾನ ನೀಡಬೇಕೆಂಬ ನಿಟ್ಟಿನಲ್ಲಿ ಮಹಿಳೆಯರ ಪರವಾಗಿ ತೀರ್ಪು ಬಂದ್ರೆ ಅದನ್ನು ಸ್ವಾಗತಿಸಬೇಕು ಅಂದರು.
ಟಿಪ್ಪ ಸುಲ್ತಾನ್ ನಿಂದ ನಮ್ಮ ಫ್ಯಾಮಿಲಿಗೆ ತೊಂದ್ರೆ ಆಗಿದೆ – ರಾಜಮಾತೆ..!
TRENDING ARTICLES