ಯಾವ್ದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಕೈ ಬಿಡಲ್ಲ ಅಂತ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ಟಿಪ್ಪು ಜಯಂತಿ ನಿಲ್ಲಿಸಲ್ಲ. ಅಂಥಾ ಯೋಚ್ನೆ ಕೂಡ ನಮ್ಮಲ್ಲಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ರೆಸ್ಟ್ ಮಾಡೋಕೆ ಅಂತ ಡಾಕ್ಟರ್ ಹೇಳಿದ್ರು. ಅದ್ಕೆ ನಾನು ಈ ವರ್ಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲಿಲ್ಲ ಅಷ್ಟೇ ಅಂತ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ರು.
ಸುದ್ದಿಗಾರರ ಜೊತೆ ಮಾತಾಡಿದ ಅವ್ರು, ಮುಂದಿನ ವರ್ಷಗಳಲ್ಲೂ ಟಿಪ್ಪು ಜಯಂತಿ ಆಚರಣೆ ಮಾಡೇ ಮಾಡ್ತೀವಿ. ಯಾವ್ದೇ ಕಾರಣಕ್ಕೂ ಕೈಬಿಡಲ್ಲ. ಸಿಎಂ ಆದವ್ರು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸ್ಬೇಕು ಅಂತ ಇಲ್ಲ ಅಂತ ಹೇಳಿದ್ರು. ವಿರೋಧದದ ನಡುವೆಯೂ ಈ ವರ್ಷ ಮೈತ್ರಿ ಸರ್ಕಾರ ಟಿಪ್ಪು ಜಯಂತಿ ಆಚರಿಸಿತ್ತು.