ವಿಜಯ್ ರಾಘವೇಂದ್ರ ಇನ್ನು ನಟ ಮಾತ್ರ ಅಲ್ಲ, ಡೈರೆಕ್ಟರ್ ಕೂಡ..! ಆ್ಯಕ್ಟಿಂಗ್ ಜೊತೆ ಆ್ಯಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ ಚಿನ್ನಾರಿ ಮುತ್ತ.
ಹೌದು,ವಿಜಯ್ ರಾಘವೇಂದ್ರ ಅವರ ನಿರ್ದೇಶನದ ಚೊಚ್ಚಲ ಚಿತ್ರ ‘ಕಿಸ್ಮತ್’ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇದೇ ನವೆಂಬರ್ 21ರಂದು ವಿಜಯ್ ರಾಘವೇಂದ್ರವ ಡೈರೆಕ್ಟರ್ ಅಂಡ್ ಹೀರೋ ಆಗಿ ನಿಮ್ಮಮುಂದೆ ಬರ್ತಿದ್ದಾರೆ. ಈ ‘ಕಿಸ್ಮತ್’ ವಿಜಯ ರಾಘವೇಂದ್ರ ಅವರ ಕನಸಿನ ಸಿನಿಮಾ. ಐದಾರು ವರ್ಷಗಳ ಹಿಂದೆಯೇ ಈ ಸಿನಿಮಾ ಕೆಲಸ ಶುರುವಾಗಿತ್ತು, ಈಗ ರಿಲೀಸ್ ರೆಡಿಯಾಗಿದೆ.
ಸಂಗೀತ ಭಟ್ ಈ ಚಿತ್ರದ ಹೀರೋಯಿನ್. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಚಿತ್ರಕ್ಕಾಗಿ ಹಾಡೊಂದನ್ನು ಹಾಡಿದ್ದಾರೆ. ಈ ಚಿತ್ರವನ್ನು ನಿರ್ಮಿಸಿರೋದು ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವ್ರು. ಇಂದು ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಕುತೂಹಲವನ್ನು ಹೆಚ್ಚಿಸಿದೆ.