ಪ್ರಸಕ್ತ ಸಾಲಿನ ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಆರಂಭದಿಂದಲೂ ಅಭಿಮಾನಿಗಳ ಪಾಲಿಗೆ ಟೀಮ್ ಇಂಡಿಯಾ ಕ್ಯಾಪ್ಟನ್ ಹರ್ಮನ್ಪ್ರೀತ್ ಕೌರ್ ಹಾಟ್ ಫೇವರೇಟ್ ಪ್ಲೇಯರ್ ಆಗಿ ಸದಾ ಸುದ್ದಿಯಲ್ಲಿದ್ದಾರೆ. ಟೂರ್ನಿಯಲ್ಲಿ ಆಡಿದ ಎರಡೂ ಮ್ಯಾಚ್ ಗಳಲ್ಲೂ ಜಯ ಸಾಧಿಸಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಟೀಮ್ ಇಂಡಿಯಾ ರೂಪುಗೊಂಡಿರೋದ್ರ ಹಿಂದೆ ಕೌರ್ ಶ್ರಮ ಹೆಚ್ಚಿದೆ. ಇದೆಲ್ಲದರ ನಡುವೆಯೇ ಭಾರತ-ಪಾಕ್ ನಡುವೆ ನಡೆದ ಮ್ಯಾಚ್ ನಲ್ಲಿ ತಾಯಿ ಪ್ರೀತಿ ತೋರಿ ನಾಯಕಿ ಮಾನವೀಯತೆ ಮೆರೆದಿದ್ದಾರೆ.
ಭಾನುವಾರ ಗಯಾನ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆದ ಭಾರತ-ಪಾಕಿಸ್ತಾನ ವಿರುದ್ಧದ ಮ್ಯಾಚ್ ಮುನ್ನ ಮಗುವೊಂದನ್ನ ಮೈದಾನದಿಂದ ಹೊರಗೆ ಎತ್ತಿಕೊಂಡು ಬಂದು ಕೌರ್ ಎಲ್ಲರ ಮನ ಗೆದ್ದಿದ್ದಾರೆ. ಮ್ಯಾಚ್ ಆರಂಭಕ್ಕೂ ಮುನ್ನ ಇತ್ತಂಡಗಳೂ ರಾಷ್ಟ್ರಗೀತೆ ಹಾಡುತ್ತಿರುವ ಸಂದರ್ಭದಲ್ಲಿ ಜೊತೆಗಿದ್ದ ಮಸ್ಕತ್ ನ ಬಳಲಿತ್ತು. ಮಗು ಅಸ್ವಸ್ಥವಾಗಿರೋದನ್ನು ಗಮನಿಸಿದ ಕೌರ್ ರಾಷ್ಟ್ರಗೀತೆ ಮುಗಿಯುವವರೆಗೂ ಕಾದರು. ಬಳಿಕ ಮೈದಾನದಿಂದ ಹೊರಕ್ಕೆ ಮಗುವನ್ನ ಕೈಯಾರೆ ಎತ್ತಿಕೊಂಡು ಬಂದು ಚಿಕಿತ್ಸೆ ನೀಡುವಂತೆ ಸೂಚಿಸಿದ್ರು.
ಟೂರ್ನಿಯ ಮೊದಲ ಪಂದ್ಯದಲ್ಲೇ ಕೌರ್ ಬ್ಯಾಟ್ನಿಂದ ಹೊರಹೊಮ್ಮಿದ್ದ ದಾಖಲೆಯ ಸೆಂಚುರಿ ಕಂಡು ದಂಗಾಗಿದ್ದ ಅಭಿಮಾನಿಗಳು ಇದೀಗ ಟೀಮ್ಇಂಡಿಯಾ ನಾಯಕಿಯ ಮಾತೃ ಹೃದಯಕ್ಕೆ ಮನಸೋತಿದ್ದಾರೆ. ಇನ್ನು ಕೌರ್ ಮಗುವಿಗೆ ಸಹಾಯ ಮಾಡುತ್ತಿರೋ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗ್ತಿದೆ.
https://twitter.com/NaaginDance/status/1061651193766662144
ಟೂರ್ನಿಯ ಆರಂಭಿಕ ಮ್ಯಾಚ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯ ಸಾದಿಸಿದ್ದ ಭಾರತೀಯ ವನಿತೆಯರು, 2ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್ಗಳ ಗೆಲುವಿನ ನಗೆ ಬೀರಿದೆ. ಆಡಿದ 2 ಪಂದ್ಯಗಳಲ್ಲಿ ಜಯ ಸಾಧಿಸಿರುವ ಹರ್ಮನ್ಪ್ರೀತ್ ಕೌರ್ ಬಳಗ ನವೆಂಬರ್ 15ರಂದು ನಡೆಯಲಿರೋ ಮ್ಯಾಚ್ ನಲ್ಲಿ ಐರ್ಲೆಂಡ್ ತಂಡವನ್ನ ಎದುರಿಸಲಿದೆ.
-ವಸಂತ್ ಮಳವತ್ತಿ. ಸ್ಪೋರ್ಟ್ಸ್ ಬ್ಯೂರೋ, ಪವರ್ ಟಿವಿ