Wednesday, September 18, 2024

ಅನಂತ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಪ್ರಧಾನಿ

ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನದಿಂದ ಇಡೀ ದೇಶದಲ್ಲಿ ಸೂತಕದ ಛಾಯೆ ಆವರಿಸಿದೆ. ಗಣ್ಯಾತಿಗಣ್ಯರು ಅನಂತ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅನಂತ ಕುಮಾರ್ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ನನ್ನ ಸ್ನೇಹಿತ ಮತ್ತು ಒಬ್ಬ ಒಳ್ಳೆಯ ಸಹದ್ಯೋಗಿಯನ್ನು ಕಳೆದುಕೊಂಡಿದ್ದೇನೆ. ಇದರಿಂದ ನಂಗೆ ತುಂಬಾನೇ ದುಃಖವಾಗಿದೆ. ಅನಂತ ಕುಮಾರ್ ಅವ್ರು ಅಸಾಮಾನ್ಯ ನಾಯಕ. ಚಿಕ್ಕ ವಯಸ್ಸಿನಲ್ಲೇ ಸಾರ್ವಜನಿಕ ಜೀವನಕ್ಕೆ ಪ್ರವೇಶ ಮಾಡಿದ ಇವರ ಎಲ್ಲಾ ಕೆಲಸ ಕಾರ್ಯಗಳು ಯಾವಗಲೂ ನೆನಪಿನಲ್ಲಿ ಇರುತ್ತವೆ ಅಂತ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಹಲವು ಸಚಿವ ಸ್ಥಾನಗಳನ್ನು ನಿಭಾಯಿಸಿದ್ದ ಅನಂತ ಕುಮಾರ್ ಬಿಜೆಪಿಗೆ ದೊಡ್ಡ ಆಸ್ತಿ ಆಗಿದ್ದರು. ಬೆಂಗಳೂರು ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಪಾರ್ಟಿಯನ್ನು ಬಲಪಡಿಸಲು ಶ್ರಮಪಟ್ಟಿದ್ದರು ಅಂತ ಮೋದಿ ಸ್ಮರಿಸಿಕೊಂಡಿದ್ದಾರೆ.

ಯಾವ್ದೇ ಸರ್ಕಾರವಿದ್ದರೂ ರಾಜ್ಯವನ್ನು ಸಮರ್ಥಿಸಿಕೊಳ್ತಿದ್ರು ಅನಂತ್ ಕುಮಾರ್

ಕೇಂದ್ರ ಸಚಿವ ಅನಂತ್ ಕುಮಾರ್ ಇನ್ನಿಲ್ಲ

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ರಾಜಕಾರಣ ಮೀರಿದ ಸ್ನೇಹ ನಮ್ಮದು : ಸಿಎಂ

RELATED ARTICLES

Related Articles

TRENDING ARTICLES