Friday, September 20, 2024

ಮನಿಷಾ ಕೊಯಿರಾಲಾಗೆ ಹೊಸ ಲೈಫ್ ಕೊಟ್ಟಿದ್ದು ಕ್ಯಾನ್ಸರಂತೆ..!

ಕ್ಯಾನ್ಸರ್ ಅನ್ನೋ ಮಹಾಮಾರಿ ಲೆಕ್ಕವಿಲ್ಲದಷ್ಟು ಜನ್ರನ್ನು ಬಲಿ ತೆಗೆದುಕೊಂಡಿದೆ. ಇವತ್ತಷ್ಟೇ ನಮ್ಮನ್ನೆಲ್ಲ ಅಗಲಿದ ಕೇಂದ್ರ ಸಚಿವ ಅನಂತ ಕುಮಾರ್ ಅವ್ರನ್ನು ಕಾಡಿದ್ದು ಕೂಡ ಇದೇ ಕ್ಯಾನ್ಸರ್. ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರನ್ನು ಇದು ಕಾಡ್ತಿದೆ. ಕ್ರಿಕೆಟಿಗ ಯುವರಾಜ್ ಸಿಂಗ್ ಇದನ್ನು ಸೋಲಿಸಿ ಗೆದ್ದಿರೋದು ನಿಮ್ಗೆ ಗೊತ್ತೇ ಇದೆ.
ಅಂತೆಯೇ ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ಕೂಡ ಕ್ಯಾನ್ಸರ್ ಗೆ ತುತ್ತಾಗಿರೋರು. ಈಗತಾನೆ ಗುಣಮುಖರಾಗಿರೋ ಇವ್ರು ‘ಕ್ಯಾನ್ಸರ್ ನಂಗೆ ಹೊಸ ಲೈಫ್ ಕೊಟ್ಟಿದೆ’ ಅಂತ ಹೇಳಿದ್ದಾರೆ. How cancer changed my life ಅಂತ ಪುಸ್ತಕವನ್ನೇ ಬರೆದಿದ್ದಾರೆ. ಟ್ವೀಟರ್ ನಲ್ಲಿ ಈ ವಿಚಾರವನ್ನು ಹಂಚಿಕೊಂಡಿರೋ ಇವರು, ಅದೆಷ್ಟೊ ಜನ ಕ್ಯಾನ್ಸರ್ ರೋಗಿಗಳಿಗೆ ಇದು ಸ್ಫೂರ್ತಿನೀಡಲಿದೆ. ಅಷ್ಟೆ ಅಲ್ಲ ನಾನು ಕ್ಯಾನ್ಸರ್ ನಿಂದ ಬಳಲುತ್ತಿದ್ದಾಗ ಎಷ್ಟು ನೋವು ಅನುಭವಿಸಿದೆ ಮತ್ತು ಅಮೇರಿಕದಲ್ಲಿ ಟ್ರೀಟ್ಮೆಂಟ್ ಪಡೆಯುವಾಗ ನನ್ನ ಸ್ಥಿತಿ ಹೇಗಿತ್ತು ಅನ್ನೋ ಅನುಭವವನ್ನು ಇದರಲ್ಲಿ ಹಂಚಿಕೊಂಡಿದ್ದೀನಿ ಅಂತ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES