ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಅಭಿನಯದ ‘ಝೀರೋ’ ಸಿನಿಮಾ ಮುಂದೆ ಕನ್ನಡಿಗ ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್’ ರಿಲೀಸ್ ಗೂ ಮುನ್ನವೇ ಹೀರೋ ಆಗಿದೆ..!
ನಿಮ್ಗೆ ಗೊತ್ತೇ ಇದೆ, ಶಾರುಖ್ ನಟನೆಯ ಝೀರೋ ಹಾಗೂ ಯಶ್ ನಟನೆಯ ಕೆಜಿಎಫ್ ಎರಡೂ ಒಂದೇ ದಿನ ರಿಲೀಸ್ ಆಗ್ತಿದೆ. ಡಿಸೆಂಬರ್ 21ರಂದು ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೇ ಝೀರೋ ಮುಂದೆ ನಾನೇ ಇರೋ ಅಂತ ಹೇಳ್ತಿದೆ ಕೆಜಿಎಫ್.
ಹೌದು ಕೆಜಿಎಫ್ ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಪ್ರಸಿದ್ಧ ಡೇಟಾ ಬೇಸ್ ವೆಬ್ ಸೈಟ್ ಇಂಟರ್ ನೆಟ್ ಮೂವಿ ಡೇಟಾ ಬೇಸ್ (ಐಎಂಡಿಬಿ) ಪಟ್ಟಿಯಲ್ಲಿ ಝೀರೋ ಅನ್ನು ಹಿಂದಿಕ್ಕಿದೆ. ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ಮೊದಲ ಸ್ಥಾನದಲ್ಲಿದೆ.
ನವೆಂಬರ್ 2ರಂದು ರಿಲೀಸ್ ಆಗಿರೋ ಝೀರೋ ಟ್ರೇಲರ್ 8 ಕೋಟಿಗೂ ಹೆಚ್ಚು ವೀವ್ಸ್ ಪಡೆದಿದೆ. ನವೆಂಬರ್ 9 ರಂದು ರಿಲೀಸ್ ಆಗಿರೋ ಕೆಜಿಎಫ್ ಕನ್ನಡದ ಟ್ರೇಲರ್ ಇದುವರೆಗೆ 71 ಲಕ್ಷ ವೀವ್ಸ್ ಆಗಿದೆ. ಹಿಂದಿಯಲ್ಲಿ 95 ಲಕ್ಷಕ್ಕೂ ಹೆಚ್ಚಿನ ಮಂದಿ ನೋಡಿದ್ದಾರೆ. ತೆಲುಗಿನಲ್ಲಿ 45 ಲಕ್ಷ ವೀವ್ಸ್ ದಾಟಿದೆ. ಅಂದಹಾಗೆ ಕೆಜಿಎಫ್ ಗೆ ಆ್ಯಕ್ಷನ್ ಕಟ್ ಹೇಳಿರೋದು ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್.
ರಿಲೀಸ್ ಗೂ ಮುನ್ನವೇ ‘ಝೀರೋ’ ಮುಂದೆ ಹೀರೋ ಆದ ‘ಕೆಜಿಎಫ್’..!
TRENDING ARTICLES