Thursday, April 25, 2024

ಆರಿದ ‘ಅನಂತ’ ದೀಪಗೆ ಗಣ್ಯರ ಅಕ್ಷರ ನಮನ

ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನದೊಂದಿಗೆ ಕರ್ನಾಟಕ ರಾಜಕಾರಣದ ಹಿರಿಯ ಕೊಂಡಿ ಕಳಚಿದೆ. ನವದೆಹಲಿಯಲ್ಲಿ ಕನ್ನಡದ ಧ್ವನಿ ಸ್ತಬ್ಧವಾಯಿಗಿದೆ. ಮರೆಯಾದ ನಾಯಕನಿಗೆ ಪ್ರಧಾನಿ ನರೇಂದ್ರ ಮೋದಿ, ಅನಂತ ಕುಮಾರ್ ಅವರ ರಾಜಕೀಯ ಗುರು ಅಡ್ವಾಣಿ ಸೇರಿದಂತೆ ಸಾಕಷ್ಟು ಮಂದಿ ಸಂತಾಪ ಸೂಚಿಸಿದ್ದಾರೆ.

ಆರಿದ ‘ಅನಂತ’ ದೀಪಗೆ ಗಣ್ಯರ ಅಕ್ಷರ ನಮನ

ನನ್ನ ಸ್ನೇಹಿತ ಮತ್ತು ಒಬ್ಬ ಒಳ್ಳೆಯ ಸಹದ್ಯೋಗಿಯನ್ನು ಕಳೆದುಕೊಂಡಿದ್ದೇನೆ. ಇದರಿಂದ ನಂಗೆ ತುಂಬಾನೇ ದುಃಖವಾಗಿದೆ. ಅನಂತ ಕುಮಾರ್ ಅವ್ರು ಅಸಾಮಾನ್ಯ ನಾಯಕ. ಚಿಕ್ಕ ವಯಸ್ಸಿನಲ್ಲೇ ಸಾರ್ವಜನಿಕ ಜೀವನಕ್ಕೆ ಪ್ರವೇಶ ಮಾಡಿದ ಇವರ ಎಲ್ಲಾ ಕೆಲಸ ಕಾರ್ಯಗಳು ಯಾವಗಲೂ ನೆನಪಿನಲ್ಲಿ ಇರುತ್ತವೆ.
-ನರೇಂದ್ರ ಮೋದಿ, ಪ್ರಧಾನಮಂತ್ರಿ

 

ನಮ್ಮ ಕುಟುಂಬದ ನಡುವೆ ಸ್ನೇಹವಿತ್ತು. ಅನಂತ ಕುಮಾರ್ ಸ್ನೇಹಕ್ಕೆ ಹೆಚ್ಚು ಮಹತ್ವ ನೀಡೋ ವ್ಯಕ್ತಿಯಾಗಿದ್ದರು. ನಾನಿಂದು ಒಬ್ಬ ಒಳ್ಳೆಯ ಗೆಳೆಯನನ್ನು ಕಳೆದುಕೊಂಡಂತಾಗಿದೆ.
-ಎಚ್.ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ

ಅನಂತ ಕುಮಾರ್ ಅವರು ತಮ್ಮ ತಲೆಮಾರಿನ ಅತ್ಯುತ್ತಮ ರಾಜಕಾರಣಿಗಳಲ್ಲಿ ಒಬ್ಬರು. ಇವರ ಜ್ಞಾನ, ಅನುಭವ ದೊಡ್ಡದು.
-ಡಾ.ಜಿ ಪರಮೇಶ್ವರ್, ಉಪಮುಖ್ಯಮಂತ್ರಿ

ನಂತ ಕುಮಾರ್ ಅವರಿಲ್ಲದೆ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಲು ಆಗುತ್ತಿರಲಿಲ್ಲ. ಇಂದು ರಾಜ್ಯದಲ್ಲಿ ಬಿಜೆಪಿ ಈ ಮಟ್ಟದಲ್ಲಿರಲು ಅನಂತ ಕುಮಾರ್ ಅವರ ಕೊಡುಗೆ ಅಪಾರ.
-ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ನಾವೆಲ್ಲ ಒಬ್ಬ ಸೃಜನಶೀಲ ವ್ಯಕ್ತಿಯನ್ನು ಕಳೆದುಕೊಂಡಿದ್ದೀವಿ.ಮ ನನ್ನ ಮತ್ತು ಅವರ ಸಂಬಂಧ ಸುಮಾರು 3 ದಶಕಗಳದ್ದು. ನಾನು ಈ ದಿನ ನನ್ನ ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೀನಿ. ವೈಯಕ್ತಿಕವಾಗಿ ಮನಸ್ಸಿಗೆ ಬಹಳ ನೋವುಂಟಾಗಿದೆ. ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾಗದ ನಷ್ಟವುಂಟಾಗಿದೆ.
-ಎಚ್.ಡಿ ದೇವೇಗೌಡ, ಮಾಜಿ ಪ್ರಧಾನಿ

ನಂತ್ ಕುಮಾರ್ ಅವರ ಅಗಲಿಕೆ ರಾಷ್ಟ್ರ ರಾಜಕಾರಣಕ್ಕೆ ಬಹಳಾ ನಷ್ಟ. ಇವರು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡ್ತಿದ್ರು. ಕೇಂದ್ರದಲ್ಲಿ ಯಾವ್ದೇ ಸರ್ಕಾರವಿದ್ರೂ ಅವರು ರಾಜ್ಯವನ್ನು ಸಮರ್ಥಿಸಿಕೊಳ್ತಿದ್ರು
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಅನಂತಕುಮಾರ್ ರವರ ಅಕಾಲಿಕ ಸಾವಿನ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಗಿದೆ. ಅವರು ಬಡವರ ಮತ್ತು ಕೆಳವರ್ಗದ ನಾಯಕರು. ಅವರ ಅಗಲುವಿಕೆ ನಮಗೆ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿಕೊಳ್ಳುತ್ತೇನೆ.
-ಎಲ್ ಕೆ. ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡ, ಅನಂತ ಕುಮಾರ್ ಅವರ ರಾಜಕೀಯ ಗುರು

ದೇಶದ ಒಂದು ದೊಡ್ಡ ವಸ್ತುವನ್ನು ಕಳೆದುಕೊಂಡಿದ್ದೇವೆ. ಅವರು ಯಾವುದೋ ಸೀಮೆ ಅಥವಾ ಪಕ್ಷಕ್ಕೆ ಸೀಮಿತವಾಗಿರಲಿಲ್ಲ.
-ಡಿ.ವಿ ಸದಾನಂದ ಗೌಡ, ಕೇಂದ್ರ ಸಚಿವ

ರಾಜ್ಯದಲ್ಲಿ ಬಿಜೆಪಿ ಸಂಘಟನೆಗಾಗಿ ಮೇನ್ ಪಿಲ್ಲರ್ ಆಗಿ ಕೆಲಸ ಮಾಡಿದ್ದರು. ಒಬ್ಬ ಸಹೋದರ ಕಳೆದುಕೊಂಡಷ್ಟು ನೋವಾಗಿದೆ.
-ಕೆ.ಎಸ್ ಈಶ್ವರಪ್ಪ, ಬಿಜೆಪಿ ಹಿರಿಯ ಮುಖಂಡ

ಅನಂತಕುಮಾರ್ ಅವರು ನಾನು ಕಂಡಂತಹ ಅದ್ಭುತ, ಸಜ್ಜನ ಮತ್ತು ಸರಳ ರಾಜಕಾರಣಿಗಳು. ಭಾರತೀಯ ಜನತಾ ಪಕ್ಷದ ಬ್ರೈನ್.
– ಜಗ್ಗೇಶ್, ನಟ

ನಾವೆಲ್ಲ ಒಂದೇ ಕುಟುಂಬದ ಸದಸ್ಯರಾಗಿದ್ವಿ. ನಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡಿದ್ದೀನಿ. ನನಗೆ ವೈಯಕ್ತಿಕವಾಗಿ ಅತೀವ ದುಃಖವಾಗಿದೆ.
_ಪ್ರಕಾಶ್ ಜಾವಡೆಕರ್, ಕೇಂದ್ರ ಮಾನವ ಸಂಪನ್ಮೂಲ ಸಚಿವ

ಅನಂತ್​ಕುಮಾರ್​ ಅಪ್ರತಿಕ ಆಡಳಿತ ಚತುರ. ಅವರ ನಿಧನ ಪಕ್ಷಕ್ಕೆ ನಷ್ಟವುಂಟಾಗಿದೆ. ನಿಧನ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ.
-ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಕೇಂದ್ರ ಸಚಿವ ಅನಂತ್ ಜೀ ಅವ್ರು ಇಂದು ಬೆಳಗ್ಗೆ ಬೆಂಗಳೂರಲ್ಲಿ ನಿಧನರಾಗಿರುವ ಸುದ್ದಿ ಕೇಳಿ ನಾನು ವಿಷಾಧಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ರಾಹುಲ್ ಗಾಂಧಿ, ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ

ದೇಶ ಕಂಡಂತ ವರ್ಣ ರಂಜಿತ ವ್ಯಕ್ತಿ ಅನಂತ್ ಕುಮಾರ್. ರಾಜ್ಯಕ್ಕೆ, ದೇಶಕ್ಕೆ ಅವರ ಸೇವೆ ಅಪಾರ. ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು
ಅನಂತಕುಮಾರ್​ ಅಜಾತ ಶತ್ರುವಾಗಿದ್ದರು. ಅವರ ಅಗಲಿಕೆ ರಾಜ್ಯಕ್ಕೆ, ದೇಶಕ್ಕೆ ನಷ್ಟ ಉಂಟು ಮಾಡಿದೆ.
-ವಾಟಾಳ್ ನಾಗರಾಜ್, ಕನ್ನಡ ಚಳುವಳಿ ಪಕ್ಷದ ಸಂಸ್ಥಾಪಕ

ರಾಷ್ಟ್ರ ಹಾಗೂ ರಾಜ್ಯದ ಹಿರಿಯ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ. ಅವರು ೧೯೮೭ರಲ್ಲಿ ಹಲವು ಚಳುವಳಿ ಮಾಡುವಾಗ ಕೇವಲ ಏಳೆಂಟು ಜನ ಅವರೊಂದಿಗಿದ್ದರು. ಅವರ ಸಂಘಟನಾ ಚಾತುರ್ಯದಿಂದ ಇಷ್ಟು ಎತ್ತರಕ್ಕೆ ಬೆಳದರು.
-ಶಂಕರ್ ಬಿದರಿ, ನಿವೃತ್ತ ಐಪಿಎಸ್

ರಾಜ್ಯ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಅನಂತಕುಮಾರ್ ಒಬ್ಬರು .ಈ ವಯಸ್ಸಿನಲ್ಲಿ ಅವರು ಹೋದದ್ದು ದುಃಖ ತಂದಿದೆ. ಅವರು ವಿಚಾರವಂತರು, ವಾಗ್ಮಿಗಳಾಗಿದ್ದರು. ರಾಜ್ಯದ ಯಾವುದೇ ಸಮಸ್ಯೆಇದ್ದರೂ ಸ್ಪಂದಿಸುತ್ತಿದ್ದರು.
ಸುತ್ತೂರು ಶ್ರೀ

ಪಕ್ಷ ಮತ್ತು ರಾಜಕಾರಣದ ಮೀರಿದ ಸ್ನೇಹವಲಯ ಸಂಪಾದಿಸಿದ್ದರು. ಅನಂತ್​ಕುಮಾರ್​ , ಅಜಾತಶತ್ರುವಾಗಿದ್ದರು.ಮೌಲ್ಯಾಧಾರಿತ ರಾಜಕಾರಣಿ ಆಗಿದ್ದರು. ಅವರೊಡನೆ ತಮಗೆ ವ್ಯಕ್ತಿಗತ ಸ್ನೇಹವೂ ಇತ್ತು.
-ಡಿ.ಕೆ ಶಿವಕುಮಾರ್, ಸಚಿವ

ನಮ್ಮ ಹಿರಿಯ ನಾಯಕರಾದ ಅನಂತ ಕುಮಾರ್ ಅವರುವಿಂದು ನಮ್ಮನ್ನಗಲಿದ್ದಾರೆ. ಅನಂತಕುಮಾರ್ ಅವರ ಜೊತೆ ನಾಲ್ಕು ವರ್ಷ ಇರುವ ಅವಕಾಶ ನನಗೆ ಸಿಕ್ಕಿತ್ತು. ಇಷ್ಟು ಚಿಕ್ಕ ವಯಸ್ಸಿಗೆ ಅವರು ನಮ್ಮನ್ನಗಲುತ್ತಾರೆಂದು ನಾನು ಊಹಿಸಿರಲಿಲ್ಲ.
– ಕರುಣಾಕರ ರೆಡ್ಡಿ, ಶಾಸಕ

ಬಹಳ ಚಿಕ್ಕವಯಸ್ಸಿನಲ್ಲೇ ಅಗಲಿರೋದು ದುಃಖ ತಂದಿದೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಚಾಪು ಮೂಡಿಸಿದ್ದರು. ಸತತವಾಗಿ ಆರು ಬಾರಿ ಸಂಸದರಾಗಿ ಆಯ್ಕೆಯಾದವರು. ಅತೀ ಚಿಕ್ಕ ವಯಸ್ಸಿನಲ್ಲೇ ಕೇಂದ್ರದ ಮಂತ್ರಿಯಾದ್ರು. ಬೆಂಗಳೂರು ಮೆಟ್ರೋ ಯೋಜನೆ ತರಲು ಆಸಕ್ತಿ ವಹಿಸಿದ್ದರು .ವೈಯಕ್ತಿಕ ನಿಂಧನೆ ಮಾಡದೇ ಸಜ್ಜನಿಕೆಯಿಂದ ಇರುತ್ತಿದ್ದರು.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ನಮ್ಮ ರಾಜ್ಯದ ದೊಡ್ಡ ಆಸ್ತಿಯನ್ನ ಕಳೆದುಕೊಂಡಿದ್ದೇವೆ. ಯಾವುದೇ ಕೆಲಸಕ್ಕೆ ಕರೆದ್ರು ಅನಂತ್ ಕುಮಾರ್ ಬಂದು ಸಲಹೆ ನೀಡುತ್ತಿದ್ದರು.
_ಜಮೀರ್ ಅಹಮದ್, ಮಾಜಿ ಸಚಿವ

ಅನಂತ್ ಅವರ ಅಗಲುವಿಕೆ ದೊಡ್ಡ ಆಘಾತವನ್ನುಂಟು ಮಾಡಿದೆ, ನಂಗೆ ಗೆಳೆಯ ಮಾತ್ರವಲ್ಲದೆ ಮಾರ್ಗದರ್ಶಕರೂ ಆಗಿದ್ದರು. ಪಾರ್ಲಿಮೆಂಟ್ ನಲ್ಲಿ ಕ್ಯಾಂಟಿನಲ್ಲಿ ಊಟ ಮಾಡಲು ಬಿಡ್ತಿರ್ಲಿಲ್ಲ. ನನ್ನ ಚೇಂಬರ್ ನಲ್ಲೇ ಊಟ ಮಾಡಬೇಕು ಅಂತ ಹೇಳ್ತಿದ್ರು.
ಪ್ರಹ್ಲಾದ್ ಜೋಷಿ, ಸಂಸದರು

ಸ್ನೇಹಿತರಾದ ಅನಂತ್ ಕುಮಾರ್ ಹಠಾತ್ ನಿಧನ ನನಗೆ ಆಘಾತ ಉಂಟು ಮಾಡಿದೆ. ರಾಜ್ಯದ ಯಾವುದೇ ಜ್ವಲಂತ ಸಮಸ್ಯೆಗಳು ಎದುರಿಗೆ ಬಂದಾಗ ದೆಹಲಿ ಮಟ್ಟದಲ್ಲಿ ನನಗೆ ಕಾಣ್ತಿದ್ದ ನಾಯಕ ಅನಂತ್ ಕುಮಾರ್ . ನಾನು ಅವರು ಹಿಂದೆ ಬೇರೆ ಬೇರೆ ಪಕ್ಷದಲ್ಲಿ ಇದ್ದರೂ ಕೂಡಾ ನನಗೆ ಸಹಕಾರ ನೀಡಿದ್ದವರು. ಅನಂತ್ ಕುಮಾರ್ ಅವರು ಹೃದಯ ವೈಶಾಲ್ಯದಿಂದ ಜನರನ್ನ ಕಾಣುತ್ತಿದ್ದವರು.
ಎಸ್.ಎಂ ಕೃಷ್ಣ, ಮಾಜಿ ಮುಖ್ಯಮಂತ್ರಿ

ದಕ್ಷಿಣಭಾರತದ ದೊಡ್ಡ ವಾಗ್ಮಿ. ಹಿರಿಯರು, ಸಿನಿಮಾ , ಸಾಹಿತ್ಯ ವಿಮರ್ಶಕ. ಅವರನ್ನು ಅಣ್ಣನಾಗಿ ಪಡೆದ ಸೌಭಾಗ್ಯ ನನ್ನದು. ಪ್ರತಿ ಹೆಜ್ಜೆಯಲ್ಲೂ ಮಾರ್ಗದರ್ಶನ ಮಾಡ್ತಿದ್ರು. ಯಡಿಯೂರಪ್ಪ ನವರು ಹಾಗೂ ಇವರು ಪಕ್ಷಕಟ್ಟಿ ಅಧಿಕಾರಕ್ಕೆ ತಂದರು. ಇದು ರಾಜ್ಯಕ್ಕಷ್ಟೆ ಅಲ್ಲ ದೇಶಕ್ಕೆ ದೊಡ್ಡ ನಷ್ಟ.
-ಅನುರಾಧ, ನಟಿ

ರಾಜ್ಯದ ವಿಷ್ಯದಲ್ಲಿ ರಾಜಕೀಯ ಎಂದೂ ಮಾಡಿಲ್ಲ. ಲೋಕಸಭೆಯಲ್ಲಿ ಕನ್ನಡವನ್ನು ಎತ್ತಿ ಹಿಡಿದವರು. ಕರ್ನಾಟಕ ಸಂಘವನ್ನು ಕಟ್ಟಲು ನೆರವು ನೀಡಿದವರು. ರಾಜಧಾನಿಯಲ್ಲಿ ಕನ್ನಡ ಕೆಲಸಗಳ ಬಗ್ಗೆ ಮಾರ್ಗದರ್ಶನ ಮಾಡ್ತಿದ್ರು. ಮೆಟ್ರೋ ವಿಶ್ವೇಶ್ವರಯ್ಯ ಹೆಸರು ಇಡಲು ಇವರೇ ಕಾರಣ.
_ವಸಂತ್ ಶೆಟ್ಟಿ ಬೆಳ್ಳಾರೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ

ಅನಂತಕುಮಾರ್ ಅವರನ್ನು ಕಳೆದುಕೊಂಡದ್ದು ನೋವಾಗಿದೆ. ಮುಂದೆ ಪ್ರಧಾನಿಯಾಗುವ ಅರ್ಹತೆ ಇದ್ದವರು. ವಿಶ್ವಮಟ್ಟದಲ್ಲಿ ಕನ್ನಡದಲ್ಲಿ ಗಮನಸೆಳೆದವರು.
-ಕರವೇ ಪ್ರವೀಣ್ ಶೆಟ್ಟಿ

ಅನಂತಕುಮಾರ್ ಅವರು ಪಕ್ಷದ ಆಸ್ತಿ. ಚಿಕ್ಕಂದಿನಿಂದ ಬಡತನದಲ್ಲಿ ಬೆಳೆದವರು. ಅವರೊಬ್ಬ ಚತುರ, ಚಾಣಕ್ಯನ ರೀತಿ ಯುವಕರನ್ನು ಬೆಳೆಸಿದರು
ನಮ್ಮಂತ ಸಾಕಷ್ಟು ಜನ ಇಷ್ಟು ಬೆಳೆಯಲು ಅವರು ಕಾರಣ
-ರಾಮ್ ದಾಸ್, ಮಾಜಿ ಸಚಿವ

ಅನಂತ್ ಕುಮಾರ್ ರಾಷ್ಟ್ರ ನಾಯಕರು, ಸದಾ ಹಸನ್ಮುಖಿ. ಅವರ ನಗುಮುಖ ನಮಗೆಲ್ಲ ನೆನಪಾಗ್ತಿದೆ. ರಾಜ್ಯ ಮತ್ತು ಕೇಂದ್ರದ ಕೊಂಡಿ ಕಳಚಿ ಬಿದ್ದಿದೆ. ಚಿತ್ರರಂಗಕ್ಕೂ ಅವರ ಸಹಾಯ ದೊಡ್ಡದಾಗಿತ್ತು.
ಶ್ರುತಿ ನಟಿ

ಅನಂತಕುಮಾರ್ ಅವರು, ಬಿಜಿಪಿ ಪಕ್ಷವನ್ನು ಬಲಪಡಿಸಲು ಹಾಗೂ ದೇಶ ಸೇವೆ ಮಾಡಲು ತಮ್ಮ ಜೀವನವನ್ನೇ ಅವರು ಮುಡಿಪಾಗಿಟ್ಟಿದ್ದರು. ಅವರ ನಿಧನದಿಂದ ತುಂಬಾ ದುಃಖವಾಗಿದೆ.
-ಶಿಲ್ಪಾ ಗಣೇಶ್, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾದ್ಯಕ್ಷೆ

ನಮಗೆ ಗುರು ಸ್ವರೂಪಿ. ನಿರಂತರವಾಗಿ ಸಂಪರ್ಕದಲ್ಲಿದ್ದರು. ಯಾವುದೇ ಸಂದರ್ಭದಲ್ಲಿ ಅವರು ನಮಗೆ ಧೈರ್ಯ ತುಂಬುತ್ತಿದ್ದರು.
ನಳಿನ್ ಕುಮಾರ್ ಕಟೀಲ್, ಸಂಸದ

ಪ್ರತಾಪಾ… ಪಾಸ್ಪೋರ್ಟ್ ಸೇವಾ ಕೇಂದ್ರ ಅಪ್ರೂವ್ ಮಾಡ್ಸಿದೀನಿ, ಮೈಸೂರು-ಬೆಂಗಳೂರು ಹೈವೇನ ಮೋದಿಜಿ ನಾಳೆ ಮಹಾರಾಜಾ ಗ್ರೌಂಡ್ ನಲ್ಲಿ ಘೋಷಣೆ ಮಾಡ್ತಾರೆ, ಏರ್ ಪೋರ್ಟ್ ಗೆ ಮರುಜೀವ ಕೊಡೋದಕ್ಕೆ ಜಯಂತ್ ಸಿನ್ಹಾಗೆ ಸೂಚಿಸಿದ್ದೇನೆ ಅಂತ ಸದಾ ಸಿಹಿ ಸುದ್ದಿ ಕೊಡುತ್ತಿದ್ದ ಆ ಧ್ವನಿಯನ್ನೇ ಕಿತ್ತುಕೊಂಡನಲ್ಲಾ ದೇವರೇ..
-ಪ್ರತಾಪ್ ಸಿಂಹ, ಸಂಸದ

RELATED ARTICLES

Related Articles

TRENDING ARTICLES