Friday, April 12, 2024

ಯಾವ್ದೇ ಸರ್ಕಾರವಿದ್ದರೂ ರಾಜ್ಯವನ್ನು ಸಮರ್ಥಿಸಿಕೊಳ್ತಿದ್ರು ಅನಂತ್ ಕುಮಾರ್

ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಅನಂತ್ ಕುಮಾರ್ ಅವರ ಅಗಲಿಕೆ ರಾಷ್ಟ್ರ ರಾಜಕಾರಣಕ್ಕೆ ಬಹಳಾ ನಷ್ಟ. ಇವರು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡ್ತಿದ್ರು. ಕೇಂದ್ರದಲ್ಲಿ ಯಾವ್ದೇ ಸರ್ಕಾರವಿದ್ರೂ ಅವರು ರಾಜ್ಯವನ್ನು ಸಮರ್ಥಿಸಿಕೊಳ್ತಿದ್ರು ಅಂತ ಸಿದ್ದರಾಮಯ್ಯ ಹೇಳಿದ್ದಾರೆ.
ಅನಂತ್ ಕುಮಾರ್ ಸಜ್ಜನ ಮತ್ತು ಸುಸಂಸ್ಕೃತ ರಾಜಕಾರಣಿ ಆಗಿದ್ರು. ರಾಷ್ಟ್ರರಾಜಕಾರಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಾವು ಬೇರೆ ಬೇರೆ ಪಕ್ಷರಾಗಿದ್ದರೂ ನಮ್ಮ ನಡುವೆ ಸ್ನೇಹವಿತ್ತು. ಅವ್ರೊಬ್ಬ ಸ್ನೇಹ ಜೀವಿ ಆಗಿದ್ರು ಅಂತ ಸಿದ್ದರಾಮಯ್ಯ ಅನಂತ್ ಕುಮಾರ್ ಅವ್ರನ್ನು ಸ್ಮರಿಸಿಕೊಂಡಿದ್ದಾರೆ.
ಬಹು ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದ ಅನಂತ್ ಕುಮಾರ್ ಅವ್ರು ಇಂದು ಮುಂಜಾನೆ ಬೆಂಗಳೂರಿನ ಚಾಮರಾಜ ಪೇಟೆಯ ಶಂಕರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಾರೆ.

ಕೇಂದ್ರ ಸಚಿವ ಅನಂತ್ ಕುಮಾರ್ ಇನ್ನಿಲ್ಲ

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

 

RELATED ARTICLES

Related Articles

TRENDING ARTICLES