ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವ್ರು ಸಂತಾಪ ಸೂಚಿಸಿದ್ದಾರೆ. ಅನಂತ ಕುಮಾರ್ ಮತ್ತು ತಮ್ಮ ನಡುವೆ ರಾಜಕಾರಣ ಮೀರಿದ ಸ್ನೇಹ ಇತ್ತು ಅಂತ ಕುಮಾರಸ್ವಾಮಿ ಹೇಳಿದ್ದಾರೆ.
ನಮ್ಮ ಕುಟುಂಬದ ನಡುವೆ ಸ್ನೇಹವಿತ್ತು. ಅನಂತ ಕುಮಾರ್ ಸ್ನೇಹಕ್ಕೆ ಹೆಚ್ಚು ಮಹತ್ವ ನೀಡೋ ವ್ಯಕ್ತಿಯಾಗಿದ್ದರು. ನಾನಿಂದು ಒಬ್ಬ ಒಳ್ಳೆಯ ಗೆಳೆಯನನ್ನು ಕಳೆದುಕೊಂಡಂತಾಗಿದೆ ಅಂತ ಸಂತಾಪ ಸೂಚಿಸಿದ್ದಾರೆ.
ಅನಂತ ಕುಮಾರ್ ಅವರು ಓರ್ವ ಮೌಲ್ಯಾಧಾರಿತ ರಾಜಕಾರಣಿ ಆಗಿದ್ದರು. ಕೇಂದ್ರ ಸಚಿವರಾಗಿ ಅವ್ರು ನೀಡಿರೋ ಕೊಡುಗೆ ಅನನ್ಯ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಅಂತ ಕುಮಾರ ಸ್ವಾಮಿ ಕಂಬನಿ ಮಿಡಿದಿದ್ದಾರೆ.
ಯಾವ್ದೇ ಸರ್ಕಾರವಿದ್ದರೂ ರಾಜ್ಯವನ್ನು ಸಮರ್ಥಿಸಿಕೊಳ್ತಿದ್ರು ಅನಂತ್ ಕುಮಾರ್