ಕೇಂದ್ರ ಸಚಿನ ಅನಂತ ಕುಮಾರ ಅವರ ಅಗಲಿಕೆಯ ನೋವು ಇಡೀ ದೇಶವನ್ನು ಕಾಡುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿ ಗ್ರಾಮ ಅನಂತ ಕುಮಾರ್ ಅವ್ರ ಹುಟ್ಟೂರು. ಅನಂತ ಕುಮಾರ್ ಅವ್ರು ಬಾಲ್ಯದ ದಿನಗಳನ್ನೆಲ್ಲಾ ಕಳೆದಿದ್ದು ಇದೇ ಗ್ರಾಮದಲ್ಲಿ. ಇವತ್ತು ಇವರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಗ್ರಾಮಸ್ಥರು ಅನಂತ ಕುಮಾರ್ ಅವರ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಕಳೆದ ಎರಡು ತಿಂಗಳ ಹಿಂದಷ್ಟೇ ಹುಟ್ಟೂರಿಗೆ ಬೇಟಿ ನೀಡಿದ್ದ ಅನಂತ ಕುಮಾರ್ ಅವ್ರು ಇಲ್ಲಿ ಅನಾಥಾಶ್ರಮ ನಿರ್ಮಿಸುವುದಾಗಿ ಹೇಳಿದ್ರು ಅಂತ ಗ್ರಾಮಸ್ಥರು ಸ್ಮರಿಸಿಕೊಂಡಿದ್ದಾರೆ. ನಮ್ಮೂರಿನ ಹಿರಿಮೆ ಅನಂತ್ ಕುಮಾರ್, ಕೇಂದ್ರ ಸಚಿವರಾಗೋ ಮೂಲಕ ನಮ್ಮೂರಿಗೆ ಹೆಸರು ತಂದಿದ್ದಾರೆ ಅಂತ ಜನ ಭಾವುಕರಾಗಿದ್ದು, ಸಂಬಂಧಿಕರು ಅಂತಿಮ ದರ್ಶನಕ್ಕಾಗಿ ಬೆಂಗಳೂರಿಗೆ ಬರ್ತಿದ್ದಾರೆ.
ದೇವನಹಳ್ಳಿಯ ಹೆಗ್ಗನಹಳ್ಳಿ ಗ್ರಾಮದಲ್ಲಿ ಅನಂತ ಕುಮಾರ್ ಆಡಿ ಬೆಳೆದ ಹೆಂಚಿನ ಮನೆ, ಸಂಬಂಧಿಕರ ಮನೆ ಸೇರಿದಂತೆ ಎಲ್ಲೆಡೆಯೂ ಮೌನ ಆವರಿಸಿಕೊಂಡಿದೆ. ಎರಡು ತಿಂಗಳ ಹಿಂದಷ್ಟೇ ಈ ಊರಿಗೆ ಹೋಗಿದ್ದ ಅನಂತ ಕುಮಾರ್ ಅವರು ಆಂಜನೇಯ ಸ್ವಾಮಿ ದೇಬಸ್ಥಾನದಲ್ಲಿ ದಂಪತಿ ಸಮೇತ ಪೂಜೆ ಸಲ್ಲಿಸಿದ್ದರು.
ಫ್ಯಾಮಿಲಿ ಊರು ತೊರೆದು ಹುಬ್ಬಳ್ಳಿ ಸೇರಿದಾಗ ಅನಂತ ಕುಮಾರ್ ಅವರಿಗೆ 13 ವರ್ಷ ವಯಸ್ಸು. ಇವರ ತಂದೆ ನಾರಾಯಣ ಶಾಸ್ತ್ರಿಯವರು ರೈಲ್ವೆ ಇಲಾಖೆ ನೌಕರರಾಗಿದ್ದ ಹಿನ್ನೆಲೆಯಲ್ಲಿ ಇವರ ಕುಟುಂಬ ಊರು ಬಿಟ್ಟಿತ್ತು. ಊರು ಬಿಟ್ಟಿದ್ದರೂ ಅನಂತ ಕುಮಾರ್ ಅಲ್ಲಿನ ಒಡನಾಟ ಮಾತ್ರ ಬಿಟ್ಟಿರಲಿಲ್ಲ.
ಅನಂತ ಕುಮಾರ್ ಅವರ ತಾಯಿ ಗಿರಿಜಮ್ಮ ಅವ್ರು ಹುಬ್ಬಳ್ಳಿ ಮಹಾನಗರ ಪಾಲಿಕೆ ಮೇಯರ್ ಆಗಿದ್ದರು. ಅನಂತ ಕುಮಾರ್ ಅವರು ಸಂಸದರು, ಕೇಂದ್ರ ಸಚಿವರಾಗಿದ್ದರೂ ಯಾವ್ದೇ ರೀತಿಯ ಆಡಂಬರ, ಅಹಂಕಾರ ಇವ್ರಲ್ಲಿ ಇರ್ಲಿಲ್ಲ. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಇವರದ್ದಾಗಿತ್ತು. ಯಾವ್ದೇ ಭದ್ರತೆ ಇಲ್ಲದೆ ಊರಿಗೆ ಬರುತ್ತಿದ್ದರು. ತನ್ನೂರಿನಲ್ಲಿ ಸಾಮಾನ್ಯನಾಗಿಯೇ ಕಾಲ ಕಳೆಯುತ್ತಿದ್ದರು. ಎಲ್ಲರ ಮನೆಗೆ ಹೋಗುತ್ತಿದ್ದರು. ಬೀದಿಗಳಲ್ಲಿ ತಿರುಗಾಡುತ್ತಿದ್ದರು. ಮಕ್ಕಳು, ಹಿರಿಯರೊಂದಿಗೆ ಬೆರೆತು ಸಂತೋಷವಾಗಿ ಕಾಲ ಕಳೀತಿದ್ದ ಇವರು ತಮ್ಮ ತಮ್ಮ ವೃದ್ಧಾಪ್ಯವನ್ನು ಹುಟ್ಟೂರಲ್ಲೇ ಕಳೆಯುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ವಿಧಿಯಾಟವೇ ಬೇರೆ ಇತ್ತು, ಅನಂತ ಕುಮಾರ್ ಇನ್ನು ನೆನಪು ಮಾತ್ರ.
ಅನಂತ ಕುಮಾರ್ ಅಗಲಿಕೆಗೆ ಕಣ್ಣೀರಿಟ್ಟ ಜೋಷಿ
ಅನಂತ ಕುಮಾರ್ ನಿಧನಕ್ಕೆ ಕಾಂಗ್ರೆಸ್ ನಾಯಕರ ಸಂತಾಪ
ಹೃದಯ ಭಾರವಾಗಿದೆ : ಅನಂತ ಕುಮಾರ್ ನಿಧನಕ್ಕೆ ಡಿವಿಎಸ್ ಸಂತಾಪ
ರಾಜ್ಯದಲ್ಲಿ ಬಿಜೆಪಿ ಕಟ್ಟಲು ಅನಂತ ಕುಮಾರ್ ಕೊಡುಗೆ ಅಪಾರ : ಬಿಎಸ್ ವೈ
ಅನಂತ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಪ್ರಧಾನಿ
ಯಾವ್ದೇ ಸರ್ಕಾರವಿದ್ದರೂ ರಾಜ್ಯವನ್ನು ಸಮರ್ಥಿಸಿಕೊಳ್ತಿದ್ರು ಅನಂತ್ ಕುಮಾರ್