Thursday, May 30, 2024

ದುನಿಯಾ ವಿಜಯ್ ಗೆ ಮತ್ತೊಂದು ಸಂಕಷ್ಟ

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಮಾರುತಿ ಗೌಡ ಮೇಲಿನ ಹಲ್ಲೆ ಆರೋಪ, ಕೌಟುಂಬಿಕ ಕಲಹದಿಂದ ಹೈರಾಣಾಗಿರೋ ವಿಜಯ್ ಮತ್ತೊಂದು ಕಂಟಕದಲ್ಲಿ ಸಿಲುಕಿದ್ದಾರೆ.
ನಿರ್ಮಾಪಕ ಸುಂದರ್ ಗೌಡನನ್ನು ಪರಾರಿ ಮಾಡಿಸಿದ ಕೇಸ್ ನಲ್ಲಿ ದುನಿಯಾ ವಿಜಯ್ ಮೇಲೆ ಸಿ ಕೆ ಅಚ್ಚುಕಟ್ಟು ಪೊಲೀಸರು ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಮಾಸ್ತಿಗುಡಿ ಶೂಟಿಂಗ್ ವೇಳೆ ನಟರಾದ ಉದಯ್ ಮತ್ತು ಅನಿಲ್ ಸಾವಿನ ಕೇಸ್ ಗೆ ಸಂಬಂಧಪಟ್ಟಂತೆ ಪ್ರೊಡ್ಯೂಸರ್ ಸುಂದರ್ ಗೌಡ ವಿಚಾರಣೆಗಾಗಿ ಕೋರ್ಟ್ ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಮನಗರ ಕೋರ್ಟ್ ಸುಂದರ್ ಗೌಡ ಮೇಲೆ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ಸುಂದರ್ ಗೌಡ ಅವ್ರನ್ನು ಅರೆಸ್ಟ್ ಮಾಡಲು ತಾವರೆಕೆರೆ ಪೊಲೀಸರು ಸಿಕೆ ಅಚ್ಚುಕಟ್ಟಲ್ಲಿರೋ ಸುಂದರ್ ಗೌಡ ಮನೆಗೆ ಅರೆಸ್ಟ್ ವಾರೆಂಟ್ ತಂದಿದ್ದರು. ಆಗ ಅಲ್ಲೇ ಇದ್ದ ದುನಿಯಾ ವಿಜಯ್ , ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿ ದೌರ್ಜನ್ಯ ನಡೆಸಿದ್ರು.
ಈ ಬಗ್ಗೆ ಕಂಪ್ಲೇಂಟ್ ದಾಖಲಾಗುತ್ತಿದ್ದಂತೆ ವಿಜಯ್ ಎಸ್ಕೇಪ್ ಆಗಿದ್ದರು. ನಂತರ ಎಸ್ ಐ ವಿನಯ್ ಬಂಡೀಪುರ ಟೈಗರ್ ರೆಸಾರ್ಟ್ ನಲ್ಲಿದ್ದ ವಿಜಯ್ ನನ್ನು ಸಿಕೆ ಅಚ್ಚುಕಟ್ಟೆ ಪೊಲೀಸರು ಬಂಡೀಪುರದಿಂದ ಕರೆತಂದು ಅರೆಸ್ಟ್ ಮಾಡಿದ್ರು. ನಂತ್ರ ವಿಜಿ ಜಾಮೀನಿನ ಮೇಲೆ ಆಚೆ ಬಂದಿದ್ರು.
ಈಗ ಈ ಕೇಸ್ ಗೆ ಸಂಬಂಧಪಟ್ಟಂತೆ ಪೊಲೀಸರು ವಿಜಯ್ ವಿರುದ್ಧ 65 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

RELATED ARTICLES

Related Articles

TRENDING ARTICLES