ನಟ ಅರ್ಜುನ್ ಸರ್ಜಾ ಸೋಮವಾರ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಗೆ ಹೋಗಲಿದ್ದಾರೆ. ನಟಿ ಶ್ರುತಿ ಹರಿಹರನ್ ಅವರ ಮೇಲಿನ ಲೈಂಗಿಕ ಕಿರುಕುಳ ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಜಾ ನಾಳೆ ವಿಚಾರಣೆಗಾಗಿ ಪೊಲೀಸ್ ಸ್ಟೇಷನ್ ಹಾಜರಾಗಲಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ನೀಡಿದ್ದು, ಸರ್ಜಾ ನಾಳೆ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಪೊಲೀಸರು ಸಾಕ್ಷಿಗಳ ಹೇಳಿಕೆ ಪಡೆದಿದ್ದಾರೆ. ಎಫ್ ಐಆರ್ ರದ್ದು ಕೋರಿ ಅರ್ಜುನ್ ಸರ್ಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 14 ಕ್ಕೆ ಮುಂದೂಡಿದೆ. ಅಷ್ಟೇ ಅಲ್ದೆ ಈ ವಿಚಾರಣೆ ಮುಗಿಯೋ ತನಕ ಅರ್ಜುನ್ ಸರ್ಜಾ ಅವ್ರನ್ನು ಅರೆಸ್ಟ್ ಮಾಡಬಾರದು ಅಂತಲೂ ಹೇಳಿರೋದ್ರಿಂದ ನಾಳೆ ವಿಚಾರಣೆ ಮುಗಿಸಿಕೊಂಡು ವಾಪಸ್ಸಾಗಲಿದ್ದಾರೆ.