ಮಾಜಿ ಸಂಸದೆ ರಮ್ಯಾ ಮತದಾನ ಮಾಡೋದನ್ನು ಮರೆತಿದ್ದಾರೆ. ರಮ್ಯಾ ಮತದಾನಕ್ಕೆ ಗೈರಾಗಿರೋದು ಇದು ಸತತ ಮೂರನೇ ಬಾರಿ.
ಇಂದು ಮಂಡ್ಯದಲ್ಲಿ ಲೋಕಸಭಾ ಉಪಚುನಾವಣೆ ನಡೆಯುತ್ತಿದೆ. ಆದ್ರೆ, ರಮ್ಯಾ ಮಂಡ್ಯದತ್ತ ತಲೆಯನ್ನೇ ಹಾಕಿಲ್ಲ. ಬೆಂಗಳೂರಿಗೂ ಬರದೇ ದೆಹಲಿಯಲ್ಲೇ ಇದ್ದಾರೆ.
ರಮ್ಯಾ ತಮ್ಮ ಆಪ್ತರ ಸಂಪರ್ಕಕ್ಕೂ ಸಿಗದೇ ಅಜ್ಞಾತ ಸ್ಥಳದಲ್ಲಿದ್ದಾರೆಂದು ತಿಳಿದುಬಂದಿದೆ. ಇವರು ಕಳೆದ ವಿಧಾಸಭಾ ಚುನಾವಣೆ ಮತ್ತು ನಗರಸಭೆ ಚುನಾವಣೆಯಲ್ಲೂ ಮತದಾನ ಮಾಡಿರಲಿಲ್ಲ.