Saturday, September 14, 2024

ಒಳ್ಳೆಯ ಹುಡಗ ಪ್ರಥಮ್ ಈಗ ಮದುಮಗ..!

ಬಿಗ್ ಬಾಸ್ ಖ್ಯಾತಿಯ ಪ್ರಥಮ್ ‘ಎಂಎಲ್ ಎ’ ಆಗ್ತಿದ್ದಾರೆ..! ಇದು ನಿಮ್ಗೆ ಗೊತ್ತೇ ಇದೆ, ಪ್ರಥಮ್ ಅವ್ರ ಎಂಎಲ್ಎ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ನವೆಂಬರ್ 9ರಂದು ರಿಲೀಸ್ ಆಗ್ತಿದೆ. ಈ ನಡುವೆ ಪ್ರಥಮ್ ತನ್ನ ಫ್ಯಾನ್ಸ್ ಗೆ ಮತ್ತೊಂದು ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ. ಅದು ಬೇರೇನೂ ಅಲ್ಲ ಅವ್ರ ಮ್ಯಾರೇಜ್ ನ್ಯೂಸ್.
ಬೆಂಗಳೂರು ಸಹವಾಸ ಸಾಕಪ್ಪ, ಸಾಕು ಅಂತ ಚಿತ್ರರಂಗ, ಬೆಂಗಳೂರು ಬಿಟ್ಟು ಊರಿಗೆ ಹೊರಟು ನಿಂತಿರೋ ಪ್ರಥಮ್, ಹಸಮಣೆ ಏರಲು ರೆಡಿಯಾಗಿದ್ದಾರೆ. ನಟಭಯಂಕರ ಸಿನಿಮಾ ಶೂಟಿಂಗ್ ಆಗ್ತಾ ಇದೆ. ಈ ಸಿನಿಮಾನೇ ತನ್ನ ಕೊನೇ ಸಿನಿಮಾ ಅಂತ ಹೇಳ್ಕೊಂಡಿರೋ ಪ್ರಥಮ್, ಮದ್ವೆ ಆಗಲಿದ್ದಾರೆ. ಹುಡುಗಿ ಯಾರೆಂದು ಇನ್ನೂ ಹೇಳಿಲ್ಲ. ಸಂಪ್ರದಾಯಸ್ಥ ಕುಟುಂದ ಹೆಣ್ಣುಮಗಳನ್ನೇ ಮದ್ವೆ ಆಗೋದು. ಆಕೆ ಪ್ಯೂರ್ ವೆಜಿಟೇರಿಯನ್  ಆಗಿರ್ಬೇಕು ಅಂತ ಪ್ರಥಮ್ ಹೇಳಿದ್ದಾರೆ. ಸದ್ಯದಲ್ಲೇ ಒಳ್ಳೆಯ ಹುಡುಗನ ಬಾಳಸಂಗಾತಿ ಯಾರು ಅನ್ನೋದು ತಿಳಿಯುತ್ತೆ.
ಇನ್ನು ರಿಲೀಸ್ ಆಗಲಿರೋ ‘ಎಂಎಲ್ ಎ’ ಬಗ್ಗೆ ಹೇಳೋದಾದ್ರೆ, ಇದು ಮೌರ್ಯ ಆ್ಯಕ್ಷನ್ ಕಟ್ ಹೇಳಿರೋ ಸಿನಿಮಾ. ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್​ ಸ್ಟಾರ್ ಯಶ್ ಸೇರಿದಂತೆ ಅನೇಕರು ಈ ಸಿನಿಮಾದ ಹಾಡುಗಳಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಯೂ ಟ್ಯೂಬ್ ನಲ್ಲಿ ಈ ಹಾಡುಗಳು, ಟ್ರೇಲರ್ ಸಖತ್ ಸೌಂಡ್ ಮಾಡ್ತಿವೆ.
-ಅರ್ಚನಾ ಗಂಗೊಳ್ಳಿ

RELATED ARTICLES

Related Articles

TRENDING ARTICLES