Monday, April 22, 2024

ಎಂ.ಜೆ ಅಕ್ಬರ್ ಮೇಲೆ ಪತ್ರಕರ್ತೆಯಿಂದ ಅತ್ಯಾಚಾರ ಆರೋಪ

ಲೈಂಗಿಕ ಕಿರುಕುಳ ಆರೋಪದಿಂದ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಂ.ಜೆ ಅಕ್ಬರ್ ವಿರುದ್ಧ ಇದೀಗ ಅತ್ಯಾಚಾರ ಆರೋಪ ಕೇಳಿಬಂದಿದೆ. ಅಮೆರಿಕಾ ಮೂಲದ ಪತ್ರಕರ್ತೆ ಪಲ್ಲವಿ ಗೊಗೊಯ್ ಅತ್ಯಾಚಾರ ಆರೋಪ ಮಾಡಿದ್ದಾರೆ. ಈ ನ್ಯೂಸ್ ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾಗಿದೆ.
ದಿ ಏಷಿಯನ್ ಏಜ್ ಪತ್ರಿಕೆಯಲ್ಲಿ ಅಕ್ಬರ್ ಅವ್ರು ಮುಖ್ಯ ಸಂಪಾದಕರಾಗಿದ್ದಾಗ, ನಾನು ಆ ಪತ್ರಿಕೆಗೆ ಕೆಲಸಕ್ಕೆ ಸೇರಿದ್ದೆ. ಅಕ್ಬರ್ ಅವ್ರ ನಾಲೆಡ್ಜ್, ಅವ್ರು ಮಾತಾಡೋ ಶೈಲಿ ಇಷ್ಟ ಆಗಿತ್ತು. ನಂತ್ರ ನಾನು ಒಪಿನಿಯನ್ ಎಡಿಟೋರಿಯಲ್ ಪೇಜ್ ನ ಸಂಪಾದಕಿ ಆದೆ. ಒಂದ್ಸಲ ನಾನು ಪೇಜ್ ರೆಡಿ ಆದ್ಮೇಲೆ ಅಕ್ಬರ್ ಗೆ ತೋರಿಸೋಕೆ ಹೋದಾಗ ಕಿಸ್ ಮಾಡೋಕೆ ಬಂದಿದ್ರು. ಅದ್ರಿಂದ ನಾನು ಬಹಳಾ ಅವಮಾನಕ್ಕೆ ಒಳಗಾದೆ. ತುಂಬಾನೇ ಕೋಪ ಬಂತು. ಕೋಪದಿಂದಲೇ ಹೊರಬಂದೆ. ಇದಾಗಿ ಕೆಲವು ತಿಂಗಳ ನಂತ್ರ ತಾಜ್ ಹೋಟೆಲ್ ನಲ್ಲಿ ಮ್ಯಾಗಜೀನ್ ರಿಲೀಸ್ ವೇಳೆ ಮತ್ತೊಮ್ಮೆ ಲೇಔಟ್ ನೋಡ್ಬೇಕು ಅಂತ ನನ್ನ ಅವ್ರಿದ್ದ ರೂಮ್ ಗೆ ಕರೆದ್ರು. ಆಗಲೂ ನಂಗೆ ಕಿಸ್ ಕೊಡೋಕೆ ಬಂದ್ರು, ನಾನು ತಪ್ಪಿಸಿಕೊಳ್ಳೋಕೆ ಪ್ರಯತ್ನ ಪಟ್ಟೆ ಆಗ ಮುಖ ಪರಚಿದ್ರು. ಇನ್ನೊಂದ್ ದಿನ ಜೈಪುರ ಹೋಟೆಲ್ ನಲ್ಲೂ ಹೀಗೆ ಮಾಡಿದ್ರು.ಹೀಗೆ ನಾನು ಅಕ್ಬರ್ ಅವ್ರಿಂದ ಮಾನಸಿಕ, ದೈಹಿಕವಾಗಿ ಛಿದ್ರಳಾಗಿದ್ದೀನಿ ಅಂತ ಪತ್ರಕರ್ತೆ ಪಲ್ಲವಿ ಗೊಗೊಯ್ ಆರೋಪ ಮಾಡಿದ್ದಾರೆ.

RELATED ARTICLES

Related Articles

TRENDING ARTICLES