ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಐಸಿಸಿ ಹಾಲ್ ಆಫ್ ಫೇಮ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಇಂಡಿಯಾ VS ವೆಸ್ಟ್ ಇಂಡೀಸ್ ನಡುವೆ ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ 5ನೇ ಹಾಗೂ ಕೊನೆಯ ಒಡಿಐ ವೇಳೆ ರಾಹುಲ್ ದ್ರಾವಿಡ್ ಅವರಿಗೆ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಲಾಯ್ತು.
ಕನ್ನಡ ರಾಜ್ಯೋತ್ಸವ ದಿನದಂದೇ ಕನ್ನಡಿಗ ದ್ರಾವಿಡ್ ಅಂತಾರಾಷ್ಟ್ರೀಯ ಗೌರವಕ್ಕೆ ಪಾತ್ರರಾಗಿರೋದು ಖುಷಿ ಮತ್ತು ಬಹಳಾ ಹೆಮ್ಮೆ ಪಡುವಂಥಾ ವಿಚಾರ.
ರಾಹುಲ್ ದ್ರಾವಿಡ್ ವರ್ಲ್ಡ್ ಕ್ರಿಕೆಟ್ ಕಂಡ ಅದ್ಭುತ ಪ್ಲೇಯರ್. ಸ್ಲಿಪ್ ನಲ್ಲಿ ದ್ರಾವಿಡ್ ಗೆ ದ್ರಾವಿಡೇ ಸಾಟಿ. 164 ಟೆಸ್ಟ್ ಮ್ಯಾಚ್ ಗಳಿಂದ 36 ಸೆಂಚುರಿ ಒಳಗೊಂಡ 13,288ರನ್, 344 ಒಡಿಐನಿಂದ 12 ಸೆಂಚುರಿ ಸಮೇತ 10.889ರನ್ ಮಾಡಿದ್ದಾರೆ. ಇನ್ನು ಒಂದೇ ಒಂದು ಇಂಟರ್ ನ್ಯಾಷನಲ್ ಟಿ20 ಮ್ಯಾಚ್ ಆಡಿದ್ದಾರೆ. ವಿಕೆಟ್ ಕೀಪರ್ ಆಗಿ, ಬ್ಯಾಟ್ಸ್ ಮನ್ ಆಗಿ ದ್ರಾವಿಡ್ ಟೀಮ್ ಇಂಡಿಯಾ ಹಾಗೂ ವರ್ಲ್ಡ್ ಕ್ರಿಕೆಟಿಗೆ ಸಲ್ಲಿಸಿದ ಸೇವೆ ಅಪಾರ.
ಭಾರತದ ಪರ ಈ ಗೌರವಕ್ಕೆ ಪಾತ್ರರಾದ 5ನೇ ಕ್ರಿಕೆಟಿಗ ದ್ರಾವಿಡ್. ದ್ರಾವಿಡ್ ಅವರಿಗೂ ಮುನ್ನ ಭಾರತದ ಭಿಷನ್ ಸಿಂಗ್ ಬೇಡಿ, ಕಪಿಲ್ ದೇವ್, ಸುನಿಲ್ ಗವಸ್ಕಾರ್, ಅನಿಲ್ ಕುಂಬ್ಳೆ ಈ ಗೌರವ ಪಡೆದಿದ್ದಾರೆ.