ಕನ್ನಡ ರಾಜ್ಯೋತ್ಸವಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ಆದ್ರೆ, ಸಂಸದೆ ಕನ್ನಡತಿ ಶೋಭಾ ಕರಂದ್ಲಾಜೆ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿ ಇಂಗ್ಲಿಷ್ ಅಭಿಮಾನ ಮೆರೆದಿದ್ದಾರೆ.
ರಾಜ್ಯೋತ್ಸವಕ್ಕೆ ಶುಭಕೋರುವ ಸಂದರ್ಭದಲ್ಲೂ ಇಂಗ್ಲಿಷ್ ಪ್ರೇಮ ಮೆರೆದ ಶೋಭ ಕರಂದ್ಲಾಜೆ ವಿರುದ್ಧ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ಇಂಗ್ಲಿಷ್ ನಲ್ಲಿ ಶುಭಕೋರಿದ್ದಕ್ಕೆ ಟೀಕೆಗಳು ವ್ಯಕ್ತವಾದ ಮೇಲೆ ಎಚ್ಚೆತ್ತುಕೊಂಡ ಕರಂದ್ಲಾಜೆ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಕನ್ನಡಿಗರಿಗೆ ಇಂದು ವಿಶೇಷ ದಿನ. ರಾಜ್ಯದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡೋ ಸಮಯ ಇದಾಗಿದೆ. ಇಂದು ನಮ್ಮ ಐತಿಹಾಸಿಕ ಪರಂಪರೆಯನ್ನು ನೆನೆಯುವ ಮುಖೇನ ಕನ್ನಡ ರಾಜ್ಯೋತ್ಸವ ಆಚರಿಸೋಣ ಅಂತ ಕರಂದ್ಲಾಜೆ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿದ್ದರು..!