Wednesday, May 22, 2024

ಒನ್ ಡೇ ಕ್ಲೈಮ್ಯಾಕ್ಸ್ : ಟಾಸ್ ಗೆದ್ದ ವಿಂಡೀಸ್ ಬ್ಯಾಟಿಂಗ್ ಆಯ್ಕೆ

ಭಾರತ ವಿರುದ್ಧದ 5ನೇ ಒಡಿಐನಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ತಿರುವನಂತರಪುರದ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರೋ ಈ ಮ್ಯಾಚ್ ನಲ್ಲಿ ಗೆದ್ದು ಸರಣಿಯನ್ನು ಕೈ ವಶ ಮಾಡಿಸಿಕೊಳ್ಳೋ ತವಕದಲ್ಲಿ ವಿರಾಟ್ ಪಡೆ ಇದೆ. ಅತ್ತ ವೆಸ್ಟ್ ಇಂಡೀಸ್ ಮ್ಯಾಚ್ ಗೆದ್ದು ಸರಣಿ ಸಮಬಲ ಸಾಧಿಸೋ ಉತ್ಸಾಹದಲ್ಲಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಡಿಸೈಡ್ ಮಾಡಿದೆ.
ಟೆಸ್ಟ್ ಸೀರಿಸ್ ಅನ್ನು ಆರಾಮಾಗಿ ಗೆದ್ದ ಭಾರತಕ್ಕೆ ಒಡಿಐನಲ್ಲಿ ವಿಂಡೀಸ್ ಪೈಪೋಟಿ ನೀಡಿದೆ. ಫಸ್ಟ್ ಮ್ಯಾಚ್ ನಲ್ಲಿ ಭಾರತ ಗೆದ್ದರೆ, ಸೆಕೆಂಡ್ ಮ್ಯಾಚ್ ರೋಚಕ ಟೈನಲ್ಲಿ ಕೊನೆಗೊಂಡಿತ್ತು. ಮೂರನೇ ಮ್ಯಾಚ್ ನಲ್ಲಿ ವಿಂಡೀಸ್ ಗೆಲುವಿನ ಕೇಕೆ ಹಾಕಿತ್ತು. ನಾಲ್ಕನೇ ಮ್ಯಾಚ್ ನಲ್ಲಿ ಟೀಮ್ ಇಂಡಿಯಾ 224 ರನ್ ಗಳ ಭರ್ಜರಿ ಜಯ ಪಡೆದಿತ್ತು. ಇದ್ರೊಂದಿಗೆ 2-1ರಲ್ಲಿ ಭಾರತ ಮುಂದಿದೆ.
ಇಂದು ನಡೆಯುವ ಮ್ಯಾಚ್ ನಲ್ಲಿ ಭಾರತ ಗೆದ್ದರೆ ಸರಣಿ ಭಾರತದ ಪಾಲಾಗುತ್ತದೆ. ವಿಂಡೀಸ್ ಗೆದ್ದಲ್ಲಿ ಸರಣಿ ಸಮಬಲ ಆಗಲಿದೆ. ಟೈ ನಲ್ಲಿ ಅಂತ್ಯವಾದರೂ ಭಾರತಕ್ಕೆ ಸರಣಿ ಜಯ ಸಿಕ್ಕಂತಾಗುತ್ತೆ.

ಟೀಮ್ ಇಂಡಿಯಾಕ್ಕೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಬಲವಿದೆ. ಇಬ್ಬರೂ ಟೀಮ್ ಗೆ ಆಧಾರವಾಗಿ ನಿಲ್ಲುತ್ತಿದ್ದಾರೆ. ಅಕಸ್ಮಾತ್ ಇಬ್ಬರಲ್ಲಿ ಒಬ್ಬರು ಫೇಲ್ಯೂರ್ ಆದರೂ ಇನ್ನೊಬ್ಬರು ರನ್ ಗಳಿಕೆ ಹೊಣೆ ಹೊತ್ತು ಕೊಳ್ಳುತ್ತಿದ್ದಾರೆ. ಟೂರ್ನಿಯಲ್ಲಿ ಕ್ಯಾಪ್ಟನ್ ಕೊಹ್ಲಿ 3 ಸೆಂಚುರಿ ಸಮೇತ 420 ರನ್ ಬಾರಿಸಿದ್ದಾರೆ. ರೋಹಿತ್ ಶರ್ಮಾ ಅವರ ಖಾತೆಯಲ್ಲಿ 2 ಸೆಂಚುರಿ ಒಳಗೊಂಡ 326 ರನ್ ಗಳಿವೆ. ಬೌಲಿಂಗ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಅತಿ ಹೆಚ್ಚು ವಿಕೆಟ್ (8) ಕಿತ್ತಿದ್ದಾರೆ.
ಅಂತೆಯೇ ವೆಸ್ಟ್ ಇಂಡೀಸ್ ಅನ್ನು ಕಡೆಗಾಣಿಸುವಂತಿಲ್ಲ. ಶಿಮ್ರಾನ್ ಹೆಟ್ನಾಯೆರ್, ಶಾಯ್ ಹೋಪ್ ಬ್ಯಾಟಿಂಗ್ ಬಲವಾಗಿದ್ದರೆ, ಆ್ಯಷ್ಲೆ ನರ್ಸ್ ಬೌಲಿಂಗ್ ನಲ್ಲಿ ಮಿಂಚಿದ್ದಾರೆ. ಅಷ್ಟೇ ಅಲ್ಲದೆ ಜಸ್ ಪ್ರೀತ್ ಬೂಮ್ರಾ ಮರಳಿರೋದು ಟೀಮ್ ನ ಬೌಲಿಂಗ್ ಬಲ ಹೆಚ್ಚಿಸಿದೆ.
ಭಾರತ ಮತ್ತು ವಿಂಡೀಸ್ ಇದುವರೆಗೆ ಒಟ್ಟು 125 ಬಾರಿ ಮುಖಾಮುಖಿ ಆಗಿವೆ. ಇದ್ರಲ್ಲಿ ಟೀಮ್ ಇಂಡಿಯಾ 58, ವಿಂಡೀಸ್ 62 ಬಾರಿ ಗೆದ್ದಿವೆ. 2 ಮ್ಯಾಚ್ ಟೈ ನಲ್ಲಿ ಕೊನೆಗೊಂಡಿದ್ದು, 3 ಮ್ಯಾಚಿನ ರಿಸೆಲ್ಟ್ ಇಲ್ಲ.

 

ಹೀಗುಂಟು ಟೀಮ್ :

ಇಂಡಿಯಾ : ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಕ್ಯಾಪ್ಟನ್), ಅಂಬಟಿ ರಾಯ್ಡು, ಎಂ.ಎಸ್ ಧೋನಿ (ವಿಕೆಟ್ ಕೀಪರ್), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಕುಲ್ದೀಪ್ ಯಾದವ್, ಕೆ ಖಲೀಲ್ ಅಹ್ಮದ್, ಜಸ್ ಪ್ರೀತ್ ಬೂಮ್ರಾ.

ವೆಸ್ಟ್ ಇಂಡೀಸ್ : ಕೀರನ್ ಪೊವೆಲ್, ಶಾಯ್ ಹೋಪ್ (ವಿಕೆಟ್ ಕೀಪರ್ ), ಮರ್ಲಾನ್ ಸ್ಯಾಮುಯೆಲ್ಸ್, ಶಿಮ್ರಾನ್ ಹೆಟ್ಮರ್, ರೋಮನ್ ಪೊವೆಲ್, ಜೇಸನ್ ಹೋಲ್ಡರ್ (ಕ್ಯಾಪ್ಟನ್), ಫ್ಯಾಬಿಯನ್ ಅಲೆನ್, ದೇವೇಂದ್ರ ಬಿಶೂ, ಕೀಮೊ ಪಾಲ್, ಕೆಮರ್ ರೋಚ್, ಒಶೇನ್ ಥಾಮಸ್

RELATED ARTICLES

Related Articles

TRENDING ARTICLES