ಇಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಬಾಯಿ ಪಟೇಲ್ರ 143ನೇ ಜಯಂತಿ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ ನರ್ಮದಾ ನದಿ ತೀರದ ಸಾಧು ಬೆಟ್ ದ್ವೀಪದಲ್ಲಿ ಸರ್ದಾರ್ ಪಟೇಲ್ ಅವರ ಪ್ರತಿಮೆ ಲೋಕಾರ್ಪಣೆಗೊಳಿಸಿದ್ದಾರೆ. ಈ ಪ್ರತಿಮೆ 182 ಮೀಟರ್ ಎತ್ತರವಿದ್ದು, ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ,
ಇದು ಅಮೇರಿಕಾದ ಲಿಬರ್ಟಿ ಸ್ಟ್ಯಾಚುವನ್ನೆ ಮೀರಿಸುವಂತಿದೆ. ಇದರ ಅಂದಾಜು ವೆಚ್ಚ ಸುಮಾರು 3,500ಕೋಟಿ ಅಂತ ಹೇಳಲಾಗಿದೆ. ಈ ಪ್ರತಿಮೆಗೆ 25,000 ಮೆ.ಟನ್ ಉಕ್ಕು, 90,000 ಮೆ.ಟನ್ ಸಿಮೆಂಟ್ ಬಳಸಲಾಗಿದ್ದು, 250 ಇಂಜಿನಿಯರ್ ಗಳು, 3,400 ಕಾರ್ಮಿಕರು ಶ್ರಮಿಸಿದ್ದಾರೆ.
ಪಟೇಲರ ಈ ಪ್ರತಿಮೆಯ ಮೂಲ ವಿನ್ಯಾಸಗಾರರು ಪ್ರಸಿದ್ಧ ಶಿಲ್ಪ ಕಲಾವಿದ ಪದ್ಮವಿಭೂಷಣ ಪುರಸ್ಕೃತ ರಾಮ್ ಸುತಾರ್. ಇವರು ಮೊದಲು 30 ಅಡಿ ಕಂಚಿನ ಪ್ರತಿಮೆಯ ಪ್ರತಿರೂಪವೊಂದನ್ನು ಸಿದ್ಧಪಡಿಸಿದ್ರು. ನಂತ್ರ ಇದನ್ನು ಎಲೆಕ್ಟ್ರಾನಿಕ್ ಡೇಟಾದಿಂದ ಸ್ಕ್ಯಾನ್ ಮಾಡಿ 182 ಮೀಟರ್ (597.11 ಅಡಿ) ಎತ್ತರಕ್ಕೆ ತಕ್ಕಂತೆ ವಿನ್ಯಾಸಗೊಳಿಸಿ, ಚೀನಾದ ಕಂಪನಿಯೊಂದರ ನೆರವಿನಿಂದ ತ್ರಿಡಿ ಜಿಗ್ ಜಾಗ್ ಮಾದರಿಯಲ್ಲಿ ಕಂಚಿನ ಹಾಳೆಗಳನ್ನು ನಿರ್ಮಾಣ ಮಾಡಿ ಹೊಂದಿಸಲಾಗಿದೆ.
ಪಟೇಲರ ಪ್ರತಿಮೆ ಅನಾವರಣಗೊಂಡಿರೋ ನರ್ಮಾದಾ ತಟದಲ್ಲಿ ಪಟೇಲರ ಜೀವನ ಚರಿತ್ರೆ ಸಾರೋ ಮ್ಯೂಸಿಯಂ, ಅಧ್ಯಯನ ಕೇಂದ್ರ, ಪಟೇಲರಿಗೆ ಸಂಬಂಧಪಟ್ಟ 40 ಸಾವಿರ ದಾಖಲೆಗಳು, 2,00 ಫೋಟೋಗಳು ಇರಲಿವೆ.
ಪ್ರತಿಮೆ ಪೀಠವಿರುವ 501 ಅಡಿ ಎತ್ತರದಲ್ಲಿ ವೀಕ್ಷಣಾ ಗ್ಯಾಲರಿ ಇದೆ. 200 ಮಂದಿಗೆ ಸ್ಥಳಾವಕಾಶವಿದ್ದು, ಇಲ್ಲಿಂದ ನರ್ಮದಾ ಆಣೆಕಟ್ಟು, ಸಾತ್ ಪುರ, ವಿಂದ್ಯಾ ಪರ್ವತ ಶ್ರೇಣಿಯ ಸೌಂದರ್ಯ ಸವಿಯಬಹುದಾಗಿದೆ. ಇಲ್ಲಿಗೆ ಹೋಗಲು ಹೈಸ್ಪೀಡ್ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ.