Friday, July 19, 2024

#MeToo ಆರೋಪ : ಕೋರ್ಟ್ ಗೆ ಹಾಜರಾದ ಅಕ್ಬರ್

#MeToo ಆರೋಪದಿಂದ ಸಚಿವ ಸ್ಥಾನ ಕಳ್ಕೊಂಡ ಮಾಜಿ ಕೇಂದ್ರ ಸಚಿವ ಎಂ.ಜೆ ಅಕ್ಬರ್  ದೆಹಲಿ ಕೋರ್ಟ್ ಗೆ ಹಾಜರಾಗಿದ್ದಾರೆ.  ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಅಕ್ಬರ್ ಈಗಾಗಲೇ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಕೇಸಿನ ವಿಚಾರಣೆಗೆ ಸಂಬಂಧಪಟ್ಟಂತೆ ಅಕ್ಬರ್ ಕೋರ್ಟ್ ನಲ್ಲಿಂದು ಹೇಳಿಕೆ ದಾಖಲಿಸಿದ್ದಾರೆ.

20 ವರ್ಷಗಳ ಹಿಂದೆ ಎಂ.ಜೆ ಅಕ್ಬರ್ ತನಗೆ ಲೈಂಗಿಕ ಕಿರುಕುಳ ನೀಡಿದ್ರು ಅಂತ ಪ್ರಿಯಾ ರಮಣಿ ಆರೋಪಿಸಿದ್ರು. ಈ ಬಗ್ಗೆ ಮಾನನಷ್ಟ ಮೊಕದ್ದಮೆ ಹಾಕಿರುವ ಅಕ್ಬರ್, ದೆಹಲಿ ಕೋರ್ಟ್ ಗೆ ಹಾಜರಾಗಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರೆದುರು ಹೇಳಿಕೆ ನೀಡಿದ್ದು, ಅದನ್ನು ನ್ಯಾಯಾಧೀಶರು ದಾಖಲಿಸಿಕೊಂಡಿದ್ದಾರೆ.

ಭಾರತದಲ್ಲಿ #MeToo ಸೌಂಡ್ ಮಾಡೋಕೆ ಶುರುಮಾಡಿ ಅಕ್ಬರ್ ವಿರುದ್ಧ ಆರೋಪಗಳ ಸುರಿಮಳೆ ಬರುವಾಗ ಅವರು ನೈಜೀರಿಯಾ ಪ್ರವಾಸದಲ್ಲಿದ್ರು. ಅಲ್ಲಿಂದ ಅಕ್ಟೋಬರ್ 14ಕ್ಕೆ ಭಾರತಕ್ಕೆ ವಾಪಸ್ಸಾಗಿ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ.

 

RELATED ARTICLES

Related Articles

TRENDING ARTICLES