Friday, February 23, 2024

ಇಂದು ಸಾಕ್ಷಿದಾರರ ವಿಚಾರಣೆ; ನಿರ್ಧಾರ ಆಗಲಿದೆ ಅರ್ಜುನ್ ಸರ್ಜಾ ಭವಿಷ್ಯ..?

ನಟ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಅವ್ರ ನಡುವಿನ ಮೀ ಟೂ ವಾರ್ ಗೆ ಸಂಬಂಧಪಟ್ಟಂತೆ ಇಂದು ಶ್ರುತಿ ಪರ ಸಾಕ್ಷಿದಾರರ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಕೇಸ್ ಗೆ ಸಂಬಂಧಪಟ್ಟಂತೆ ಕಬ್ಬನ್ ಪಾರ್ಕ್ ಸ್ಟೇಷನ್ ಪೊಲೀಸರು ಸಾಕ್ಷಿದಾರರಾದ ಮೋನಿಕಾ, ಕಿರಣ್ ಹಾಗೂ ಬೋರೇಗೌಡಗೆ ಸಿಆರ್ ಪಿಸಿ 91ರ ಅಡಿಯಲ್ಲಿ ನೋಟಿಸ್ ನೀಡಿದ್ದರು. ನಿನ್ನೆ ಮೋನಿಕಾ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ರು, ಕಿರಣ್ ಚೆನ್ನೈನಿಂದ ಬರುವುದು ತಡವಾಗಿದ್ದರಿಂದ ಅವರು ವಿಚಾರಣೆಗೆ ಹಾಜರಾಗಿರ್ಲಿಲ್ಲ. ಇಂದು ಕಿರಣ್ ಮತ್ತು ತಮ್ಮನ ಮದ್ವೆ ಹಿನ್ನೆಲೆಯಲ್ಲಿ ವಿಚಾರಣೆಗೆ ತಡವಾಗಿ ಹಾಜರಾಗುವುದಾಗಿ ಮನವಿ ಮಾಡಿದ್ದ ಬೋರೇಗೌಡ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಲಿದ್ದಾರೆ ಅಂತ ತಿಳಿದು ಬಂದಿದೆ. ಈ ಸಾಕ್ಷಿದಾರರ ಹೇಳಿಕೆ ಮೇಲೆ ಅರ್ಜುನ್ ಸರ್ಜಾ ಭವಿಷ್ಯ ನಿಂತಿದೆ.

RELATED ARTICLES

Related Articles

TRENDING ARTICLES