ನಟ ಅರ್ಜುನ್ ಸರ್ಜಾ ಮತ್ತು ನಟಿ ಶ್ರುತಿ ಹರಿಹರನ್ ನಡುವೆ ಕಳೆದೊಂದು ವಾರದಿಂದ ನಡೆಯುತ್ತಿರೋ ಮೀ ಟೂ ವಾರ್ ನಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ಡೆವಲಪ್ಮೆಂಟ್ ಗಳಾಗ್ತಾ ಇವೆ. ಅಂತೆಯೇ ಇವತ್ತೂ ಕೂಡ ಒಂದಷ್ಟು ಡೆವಲಪ್ಮೆಂಟ್ ಗಳು ಆಗೋದ್ರಲ್ಲಿ ಡೌಟಿಲ್ಲ.
ಲೈಂಗಿಕ ಕಿರುಕುಳದಂತಹ ಕೇಸ್ ಗಳಲ್ಲಿ ಸಿ ಆರ್ ಪಿಸಿ 164ರಡಿ ಸಂತ್ರಸ್ತರು ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆಗಳನ್ನು ಕೊಡ್ಬೇಕು.ಅದರಂತೆ ಶ್ರುತಿ ಹರಿಹರನ್ ಇವತ್ತು ಕೋರ್ಟ್ ನಲ್ಲಿ ತಮ್ಮ ಸ್ಟೇಟ್ಮೆಂಟ್ ಕೊಡೋ ಸಾಧ್ಯತೆ ಉಂಟು. ಶ್ರುತಿ ಈಗಾಗಲೇ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾರೆ. ಇವತ್ತು ಕೋರ್ಟ್ ನಲ್ಲಿ ತಮ್ಮ ಹೇಳಿಕೆ ಕೊಟ್ಟರೆ, ಆ ನಂತ್ರ ವಿಚಾರಣೆ ವೇಳೆ ಹೇಳಿಕೆಯನ್ನು ಬದಲಾಯಿಸಲು ಆಗಲ್ಲ.
ಜೊತೆಗೆ ಶ್ರುತಿ ಈ ಕೇಸ್ ಗೆ ಸಂಬಂಧಪಟ್ಟಂತೆ ಶ್ರುತಿ ಹೇಳಿರೋ ಇಬ್ಬರು ಸಾಕ್ಷಿಗಳ ಹೇಳಿಕೆಗಳನ್ನು ಪೊಲೀಸರು ಪಡೆಯೋ ಸಾಧ್ಯತೆ ಇದೆ. ಶ್ರುತಿ ಬೋರೇಗೌಡ ಮತ್ತು ಕಿರಣ್ ಅನ್ನೋರ ಹೆಸ್ರನ್ನು ಸಾಕ್ಷಿಯಾಗಿ ಪ್ರಸ್ತಾಪ ಮಾಡಿದ್ರು, ಅಂತೆಯೇ ಅರೆಸ್ಟ್ ಆಗೋ ಭೀತಿಯಲ್ಲಿರೋ ಅರ್ಜುನ್ ಸರ್ಜಾ ನಿರೀಕ್ಷಿಣಾ ಜಾಮೀನು ಕೋರಿ ಕೋರ್ಟ್ ಗೆ ಹೋಗಬಹುದು.