ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ತಮ್ಮ ಮೊದಲ ಪತ್ನಿ ನಾಗರತ್ನಗೆ ಡೈವರ್ಸ್ ನೀಡಲು ಡಿಸೈಡ್ ಮಾಡಿದ್ದಾರೆ. ಇಂದು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇಧನಕ್ಕೆ ವಿಜಿ ಅರ್ಜಿ ಸಲ್ಲಿಸಿದ್ದಾರೆ. ಕೌಟುಂಬಿಕ ಕಾರಣವೊಡ್ಡಿ ವಿಜಿ ಡೈವರ್ಸ್ ಗೆ ಅರ್ಜಿ ಸಲ್ಲಿಸುತ್ತಿರೋದು ಇದು ಎರಡನೇ ಬಾರಿ. ಈ ಹಿಂದೆಯೂ ಒಮ್ಮೆ ವಿಜಿ ಡೈವರ್ಸ್ ಗೆ ಅರ್ಜಿ ಸಲ್ಲಿಸಿದ್ರು. ಆದ್ರೆ, ಮನಸ್ಸು ಬದಲಾಯಿಸಿ ರಾಜಿ ಮಾಡ್ಕೊಂಡು ವಾಪಸ್ಸು ತಗೊಂಡಿದ್ರು.
ಇತ್ತೀಚೆಗೆ ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣದ ಆರೋಪದ ಮೇಲೆ ವಿಜಿ ಜೈಲು ಸೇರಿದ್ರು. ಆಗಿನಿಂದ ಇವರ ಫ್ಯಾಮಿಲಿ ಫೈಟ್ ಮತ್ತೆ ಜೋರಾಗಿ ಬೀದಿಗೆ ಬಂದಿದೆ. ಎರಡನೇ ಹೆಂಡ್ತಿ ಕೀರ್ತಿಗೌಡ ಮತ್ತು ನಾಗರತ್ನ ಅವ್ರ ಕಿತ್ತಾಟ ಜಾಸ್ತಿ ಆಗಿದ್ದು, ವಿಜಿ ಸಿನಿಮಾಕ್ಕಿಂತ ಹೆಚ್ಚಾಗಿ ಈ ಫ್ಯಾಮಿಲಿ ಪ್ರಾಬ್ಲಮ್ ಕಡೆಗೇ ಹೆಚ್ಚು ಗಮನ ಕೊಡ್ಬೇಕಾಗಿ ಬಂದಿದೆ. ಈ ಕೌಟುಂಬಿಕ ಕಲಹದಿಂದ ನೊಂದಿರೋ ವಿಜಿ ಡೈವರ್ಸ್ ಗೆ ಮುಂದಾಗಿರೋದಾಗಿ ತಿಳಿಸಿದ್ದಾರೆ.