ರಾಜ್ಯದಲ್ಲಿ ಸ್ಯಾಂಡಲ್ ವುಡ್ ನಂತ್ರ, ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೂ ಮೀ ಟೂ ಘಾಟು ಬಡಿದಿದೆ. ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಬೆಂಗಳೂರು ನಗರ ಘಟಕದ ಪ್ರೆಸಿಡೆಂಟ್ ಹಾಗೂ ಬಿಬಿಎಂಪಿ ನೌಕರ ಆಗಿರೋ ಮಾಯಣ್ಣ ಮಹಿಳಾ ನೌಕರರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರೋ ಆರೋಪ ಕೇಳಿಬಂದಿದೆ.
ಮಾಜಿ ಗುತ್ತಿಗೆ ನೌಕರೆ ಹೇಮಾಲತಾ ಅನ್ನೋರು ಮಾಯಣ್ಣ ವಿರುದ್ಧ ಆರೋಪ ಮಾಡಿದ್ದಾರೆ. ಮದ್ವೆ ಆಗ್ತೀನಿ ಅಂತ ನಂಬಿಸಿ ಮಾಯಣ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಅನ್ನೋದು ಹೇಮಾ ಅವ್ರ ಆರೋಪ. ಟೆಸ್ಟ್ ಟ್ಯೂಬ್ ಮೂಲಕ ಮಗು ಕೊಟ್ರೆ 1 ಕೋಟಿ ರೂ ಕೊಡ್ತೀನಿ ಅಂತ ಮಾಯಣ್ಣ ಆಮಿಷ ಒಡ್ಡಿದ್ರು. ಅವ್ರ ಅಕ್ರಮ ಬಯಲಿಗೆಳೆದಿದ್ದಕ್ಕೆ ಕೆಲಸದಿಂದಲೇ ಗೇಟ್ ಪಾಸ್ ಕೊಟಿದ್ರು. ಅಷ್ಟೇ ಅಲ್ದೆ ನಾನು ಕೆಲಸಕ್ಕಂತ ಎಲ್ಲೇ ಅಪ್ಲಿಕೇಷನ್ ಹಾಕಿದ್ರೂ ಕೆಲಸ ಸಿಗದಂತೆ ಕಲ್ಲಾಕ್ತಾರೆ. ನಾನೀಗ ನಿರುದ್ಯೋಗಿ ಆಗಿರೋದಕ್ಕೆ ಮಾಯಣ್ಣನೇ ಕಾರಣ. ಎಲ್ಲೇ ಸಿಕ್ರೂ ಅಶ್ಲೀಲವಾಗಿ ಮಾತಾಡ್ತಾರೆ ಅಂತ ಹೇಮಾಲತಾ ಆರೋಪಿಸಿದ್ದಾರೆ.