Saturday, June 22, 2024

ಸೆಲ್ಫಿ ನೆಪದಲ್ಲಿ ಜಗನ್ ಹತ್ಯೆಗೆ ಯತ್ನ..!

ವೈಎಸ್ ಆರ್ ಕಾಂಗ್ರೆಸ್ ನ ನಾಯಕ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವ್ರ ಕೊಲೆ ಯತ್ನ ನಡೆದಿದೆ. ವಿಶಾಖಪಟ್ಟಣ ಏರ್ ಪೋರ್ಟ್ ನಲ್ಲಿ ಜಗನ್ ಮೇಲೆ ದುಷ್ಕರ್ಮಿಯೊಬ್ಬ ಸೆಲ್ಫಿ ತೆಗೆದುಕೊಳ್ಳೋ ನೆಪದಲ್ಲಿ ಚಾಕುವಿನಿಂದ ಇರಿದಿದ್ದಾನೆ. ಸೆಲ್ಫಿ ಬೇಕು ಅಂತ ಬಂದ ಯುವಕ ಜಗನ್ ಅವ್ರ ಜೊತೆ ಮಾತಿಗಿಳಿದಿದ್ದಾನೆ. ಮಾತಾಡುವಾಗ ಮುಂದಿನ ವಿಧಾನಸಭಾ ಎಲೆಕ್ಷನ್ ಬಗ್ಗೆ ಮಾತಾಡಿದ್ದಾನೆ. ಈ ವೇಳೆ 168 ಸೀಟ್ ಗೆದ್ರೆ ಏನ್ ಮಾಡ್ತೀರಿ? 160 ಸೀಟ್ ಗೆದ್ದೇ ಗೆಲ್ತೀರಿ ಅಂತ ಕೇಳಿ ಸೆಲ್ಫಿ ತೆಗೆದುಕೊಳ್ಳೋ ನಾಟಕ ಮಾಡಿ ಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ. ಸೆಲ್ಫಿ ತಗೋತೀನಿ ಅಂತ ಇದ್ದಕ್ಕಿದ್ದಂತೆ ಚಾಕುವಿನಿಂದ ಇರಿದಿದ್ದಾನೆ. ಅದೃಷ್ಟವಶಾತ್ ಜಗನ್ ಭುಜಕ್ಕೆ ಚಾಕು ಇರಿದಿದ್ದು,ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏರ್ ಪೋರ್ಟ್ ಒಳಗೆ ಚಾಕುವಿನಂತಹ ವಸ್ತುಗಳನ್ನು ತಗೊಂಡು ಹೋಗಲು ಅವಕಾಶವಿಲ್ಲ. ಹೀಗಿದ್ದರೂ ಆರೋಪಿ ಹೇಗೆ ಚಾಕು ತಗೊಂಡು ಹೋದ ಅನ್ನೋದು ಪ್ರಶ್ನೆ. ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ಬಳಿಕ ಸತ್ಯ ಹೊರ ಬೀಳಲಿದೆ.

RELATED ARTICLES

Related Articles

TRENDING ARTICLES