ಡಿಡಿಎಲ್ ಜೆ (ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ) ಬಾಲಿವುಡ್ ನ ಎವರ್ ಗ್ರೀನ್ ಸಿನಿಮಾ. ಶಾರುಖ್ ಖಾನ್, ಕಾಜೋಲ್ ಅಭಿನಯದ ಈ ಮೂವಿ ರಿಲೀಸ್ ಆಗಿದ್ದು 1995ರಲ್ಲಿ. ಆದ್ರೆ ಇಂದಿಗೂ ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.
ಮುಂಬೈನ್ ಮರಾಠ ಚಿತ್ರಮಂದಿರದಲ್ಲಿ ರಿಲೀಸ್ ಆದದಲ್ಲಿಂದ ಒಂದೇ ಒಂದು ದಿನ ಬಿಡದೆ ಇಂದಿಗೂ ಪ್ರದರ್ಶನಗೊಳ್ತಿದೆ. ಬರೋಬ್ಬರಿ 1,200 ವಾರಗಳ ದಾಖಲೆ ಪ್ರದರ್ಶನವನ್ನು ಕಂಡಿದೆ,
ಆದಿತ್ಯ ಚೋಪ್ರಾ ಆ್ಯಕ್ಷನ್ ಕಟ್ ಹೇಳಿರೋ ಈ ಸಿನಿಮಾ ಇಂದಿಗೂ ಕೆಲವೊಂದ್ಸಲ ಬೆಳಗ್ಗೆ 11.30ರ ಶೋನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣ್ತಿರೋದು ಬಹುದೊಡ್ಡ ರೆಕಾರ್ಡ್ ಆಗಿದೆ.