Sunday, June 23, 2024

`ಅಂಬಿ ನಿಂಗೆ ವಯಸ್ಸಾಯ್ತೋ` ಅಂತ ನನ್ನನ್ನು ಸಭೆಗೆ ಕರೆದಿದ್ರು..!

ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಮಾಡಿರೋ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಫಿಲ್ಮ್ ಛೇಂಬರ್ ನಲ್ಲಿ ಇವತ್ತು ವಿಚಾರಣಾ ಸಭೆ ನಡೆದಿತ್ತು. ಈ ಸಭೆಯಲ್ಲಿ ಸಂಧಾನ ಮಾತ್ರ ಸಾಧ್ಯ ಆಗ್ಲಿಲ್ಲ. ಚಿತ್ರರಂಗದ ಹಿರಿಯರು ಸೇರಿ, ಸ್ಯಾಂಡಲ್ ವುಡ್ ನ ಘನತೆ ಕಾಪಾಡೋ ಉದ್ದೇಶದಿಂದ ಸಭೆ ನಡೆಸಿದ್ರು. ಈ ಸಭೆ ನೇತೃತ್ವವಹಿಸಿದ್ದು ಕಲಾವಿದರ ಸಂಘದ ಪ್ರೆಸಿಡೆಂಟ್ ರೆಬಲ್ ಸ್ಟಾರ್ ಅಂಬರೀಶ್ ಅವ್ರು.
ಸಭೆ ನಂತ್ರ ಪ್ರೆಸ್ ಮೀಟ್ ನಡೀತು. ಆ ಪ್ರೆಸ್ ಮೀಟ್ ನಲ್ಲಿ ಅಂಬಿ ತಮ್ಮ ಮಾಮೂಲಿ ವರಸೆಯಲ್ಲೇ ಹಾಸ್ಯ ಚಟಾಕಿ ಹಾರಿಸ್ತಾ ಮಾತಾಡಿದ್ರು.

ಕಾಂಪ್ರಮೈಸ್ ಇಲ್ವೇ ಇಲ್ಲ; ಇನ್ನೇನಿದ್ರೂ ಕೋರ್ಟ್ ನಲ್ಲೇ ಮಾತು ಅಂದ ಸರ್ಜಾ

ಶ್ರುತಿ ಈ ಕಾರಣಕ್ಕಾಗಿ ಬೆಳಗ್ಗೆಯವರೆಗೆ ವ್ಹೇಟ್ ಮಾಡ್ತಾರಂತೆ..! 

ಸರ್ಜಾ-ಶ್ರುತಿ ವಾರ್ ಗೆ ಟ್ವಿಸ್ಟ್ ; ಈ ರಂಪಾಟದ ಹಿಂದಿದೆ ಇಬ್ಬರು ಹಿರಿಯ ನಟರ ಕೈವಾಡ..?

`ನಾನೇನು ಸುಪ್ರೀಂಕೋರ್ಟ್ ಜಡ್ಜ್ ಅಲ್ಲ. `ಅಂಬಿ ನಿಂಗೆ ವಯಸ್ಸಾಯ್ತೋ’ ಅಂತ ನನ್ನ ಪರಿಗಣಿಸಿ ಈ ಸಭೆಗೆ ಕರೆದಿದ್ರು. ಹಿರಿಯರೆಲ್ಲಾ ಸೇರಿ ಇಬ್ರನ್ನೂ ಮಾತನಾಡಿಸಿದ್ವಿ. ಇಬ್ರೂ ತಮ್ಮ ತಮ್ಮ ಅಭಿಪ್ರಾಯ, ನೋವನ್ನು ಹೇಳ್ಕೊಂಡಿದ್ದಾರೆ ಅಂದ್ರು.
ಈ ಕೇಸ್ ಈಗಾಗ್ಲೇ ಕೋರ್ಟ್ ನಲ್ಲಿರೋದ್ರಿಂದ ನಾವು ಮಾತಡಕ್ಕೆ ಆಗಲ್ಲ. ನೇರವಾಗಿ ನಮ್ ಬಳಿಯೇ ಬಂದಿದ್ರೆ ಬಗೆಹರಿಸಬಹುದಿತ್ತು, ಕೋರ್ಟ್ ನಲ್ಲಿರೋದ್ರಿಂದ ಯೋಚ್ನೆ ಮಾಡ್ದೆ ಮಾತಾಡಕ್ಕೆ ಬರಲ್ಲ ಅಂತ ಹೇಳಿದ್ರು.

RELATED ARTICLES

Related Articles

TRENDING ARTICLES