ಮುಂಬೈನಲ್ಲಿ ನಡೆದ ಯಂಗ್ ಥಿಂಕರ್ಸ್ ಸಮ್ಮೇಳನದಲ್ಲಿ ನೀಡಿದ್ದ ಹೇಳಿಕೆಯನ್ನು ಕೇಂದ್ರಸಚಿವೆ ಸ್ಮೃತಿ ಇರಾನಿ ಸಮರ್ಥಿಸಿಕೊಂಡಿದ್ದಾರೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತಾಡಿದ್ದ ಸ್ಮೃತಿ, ‘ ಮುಟ್ಟಾದಾಗ ಫ್ರೆಂಡ್ಸ್ ಮನೆಗೆ ಹೋಗ್ತೀರಾ?’ ಅಂತ ಕೇಳಿದ್ರು.
ಯಾರಾದ್ರು ಮುಟ್ಟಾದಾಗ ರಕ್ತದ ಸ್ಯಾನಿಟರಿ ನ್ಯಾಪ್ಕಿನ್ ಜೊತೆಗೆ ಫ್ರೆಂಡ್ಸ್ ಮನೆಗೆ ಹೋಗ್ತಾರಾ? ನಮ್ಗೆ ಪ್ರಾರ್ಥಿಸೋ ಹಕ್ಕಿದೆಯೇ ಹೊರತು ಅಪವಿತ್ರಗೊಳಿಸೋ ಹಕ್ಕಿಲ್ಲ ಅಂತ ಸ್ಮೃತಿ ಹೇಳಿದ್ರು.
ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ನೀಡಿದ್ದ ಈ ಹೇಳಿಕೆಗೆ ಸಿಕ್ಕಾಪಟ್ಟೆ ಟೀಕೆಗಳು ಬಂದಿದ್ವು. ಇವತ್ತು ಸ್ಮೃತಿ ಟ್ವೀಟರ್ ನಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಂಗೆ ನನ್ನದೇ ಆದ ದೃಷ್ಟಿಕೋನ ಹೊಂದೋ ಸ್ವಾತಂತ್ರ್ಯವಿಲ್ಲ. ಆದ್ರೆ ಉದಾರ ದೃಷ್ಟಿಕೋನವನ್ನು ನಾನು ಒಪ್ತೀನಿ ಅಂತ ಸ್ಮೃತಿ ಹೇಳಿದ್ದಾರೆ. ಇದನ್ನು ಕೂಡ ನೆಟ್ಟಿಗರು ವಿರೋಧಿಸ್ತಿದ್ದಾರೆ