ಸಿಎಂ ಕುಮಾರಸ್ವಾಮಿ ಮಾಡಿದ ತಪ್ಪಿಗೆ ಪತ್ನಿ ಅನಿತಾ ಕುಮಾರಸ್ವಾಮಿ ಅವ್ರು ಶಿಕ್ಷೆಗೆ ಗುರಿಯಾಗಿದ್ದಾರೆ..! ಅಯ್ಯೋ ಮುಖ್ಯಮಂತ್ರಿಗಳು ಏನ್ ಮಾಡಿದ್ರು? ಅನಿತಾ ಕುಮಾರಸ್ವಾಮಿಗೆ ಯಾರು ಯಾವ ಶಿಕ್ಷೆ ಕೊಟ್ರು ಅಂತ ಕೇಳ್ತಿದ್ದೀರಾ? ಕುಮಾರಸ್ವಾಮಿ ಅವ್ರು ಮಾಡಿದ ತಪ್ಪು ಏನಪ್ಪಾ ಅಂದ್ರೆ ಕೊಟ್ಟ ಮಾತು ತಪ್ಪಿದ್ದು..! ಇದೇ ತಪ್ಪಿಗೆ ಮತದಾರರು ಮತ ಕೇಳೋಕೆ ಬಂದ ಅನಿತಾ ಅವ್ರನ್ನು ಬಹಿಷ್ಕರಿಸಿದ್ದಾರೆ..!
ಮಂಡ್ಯ, ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರ ಹಾಗೂ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3ರಂದು ಎಲೆಕ್ಷನ್ ನಡೆಯಲಿದೆ. ಈ ಎಲೆಕ್ಷನ್ ಹತ್ತಿರ ಬರ್ತಿದ್ದಂತೆ ಪ್ರಚಾರದ ಕಾವು ಹೆಚ್ಚಾಗ್ತಿದೆ. ಅಂತೆಯೇ ರಾಮನಗರದಲ್ಲಿ ಕಣಕ್ಕಿಳಿದಿರೋ ಅನಿತಾ ಕುಮಾರಸ್ವಾಮಿ ಇವತ್ತಿಂದ ಪ್ರಚಾರ ಆರಂಭಿಸಿದ್ದಾರೆ.
ಕ್ಯಾಂಪೇನ್ ನ ಫಸ್ಟ್ ಡೇ ಅನಿತಾ ಪಾಲಿಗೆ ಬ್ಯಾಡ್ ಡೇ ಆಗಿದೆ. ಮೈತ್ರಿ ಕ್ಯಾಂಡಿಡೇಟ್ ಅನಿತಾ ಅವ್ರ ವಿರುದ್ಧ ಕಾಲೋನಿಯೊಂದ್ರ ಜನ ತಿರುಗಿಬಿದ್ದಿದ್ದಾರೆ..! ಸಿಎಂ ಕೊಟ್ಟ ಭರವಸೆ ಈಡೇರಿಸದೇ ಇರೋದೇ ಇದಕ್ಕೆ ಕಾರಣ.
ರಾಮನಗರ ತಾಲೂಕಿನ ಪೇಟೆಕುರುಬಳ್ಳಿ ಗ್ರಾಮದ ಜನತಾ ಕಾಲೋನಿ ಜನ ಮತದಾನ ಬಹಿಷ್ಕರಿಸಲು ಡಿಸೈಡ್ ಮಾಡಿದ್ದಾರೆ. ಕಾಲೋನಿಯಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಹಾಕಿ ಸಿಎಂ ಮತ್ತು ಸಿಎಂ ಪತ್ನಿ ವಿರುದ್ಧ ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಲೋನಿಯಲ್ಲಿ ಯಾವ್ದೇ ಮೂಲಭೂತ ಸೌಕರ್ಯವಿಲ್ಲ. ರಸ್ತೆ, ಚರಂಡಿ ವ್ಯವಸ್ಥೆ ಮಾಡಿಕೊಟ್ಟಿಲ್ಲ. ನಾಲ್ಕೈದು ಬಾರಿ ಸಿಎಂಗೆ ಮನವಿ ಮಾಡಿದ್ದೀವಿ. ಜನತಾ ದರ್ಶನ ಮತ್ತು ದೇವಸ್ಥಾನದ ಉದ್ಘಾಟನೆಗೆ ಬಂದಾಗ ಸಿಎಂ ಹತ್ರ ಮನವಿ ಮಾಡಿದ್ದೀವಿ. ಆದ್ರೂ ಸಿಎಂ ನಮ್ಮ ಮನವಿಗೆ ಸ್ಪಂದಿಸಿಲ್ಲ ಅಂತ ಜನ ಗರಂ ಆಗಿದ್ದಾರೆ. ಅಷ್ಟೇ ಅಲ್ಲ ನಮ್ ಕಾಲೋನಿಯಲ್ಲಿ 125 ಮತಗಳಿವೆ. ನಾವ್ಯಾರೂ ಮತ ಹಾಕಲ್ಲ ಅಂತ ಹೇಳ್ತಿದ್ದಾರೆ.