ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ 61ನೇ ಇಂಟರ್ ನ್ಯಾಷನಲ್ ಸೆಂಚುರಿ ಬಾರಿಸಿದ್ದಾರೆ.
ವಿಶಾಖ ಪಟ್ಟಣದಲ್ಲಿ ನಡೆಯುತ್ತಿರೋ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಒನ್ ಡೇ ಮ್ಯಾಚ್ ನಲ್ಲಿ ಕೊಹ್ಲಿ ಆಕರ್ಷಕ ಶತಕ ಸಿಡಿಸಿದ್ದು, ಇದು ಇವರ 37ನೇ ಒಡಿಐ ಸೆಂಚುರಿ. ಟೆಸ್ಟ್ ಹಾಗೂ ಒಡಿಐ ಸೇರಿದಂತೆ 61ನೇ ಶತಕ ಇದಾಗಿದೆ.
ಕ್ಯಾಪ್ಟನ್ ಆಗಿ ಕೊಹ್ಲಿಗೆ ಇದು 15ನೇ ಒಡಿಐ ಸೆಂಚುರಿಯಾಗಿದೆ. ವಿಶಾಖಪಟ್ಟಣದಲ್ಲಿ ಕೊಹ್ಲಿ 100 ರನ್ ಗಡಿ ದಾಟಿರೋದು ಇದು ಮೂರನೇ ಬಾರಿ.
ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರೋ ಒನ್ ಡೇ ಕ್ರಿಕೆಟ್ ಟೂರ್ನಿಯಲ್ಲಿ ಕೊಹ್ಲಿ ಬ್ಯಾಟ್ನಿಂದ ಸಿಡಿದ 2ನೇ ಸೆಂಚುರಿ ಇದು. ಮೊದಲ ಮ್ಯಾಚ್ ನಲ್ಲಿ 140 ರನ್ ಬಾರಿಸಿದ್ರು.
There is no stopping this fella @imVkohli, whaddaplayaaa 🔥🔥 pic.twitter.com/4Hkt55TsHF
— BCCI (@BCCI) October 24, 2018
ಸಚಿನ್ ಗಿಂತ ಕೊಹ್ಲಿಯೇ ಬೆಸ್ಟ್ ಅಂತಿದೆ ಇವತ್ತು ಮಾಡಲಿರೋ ಈ ರೆಕಾರ್ಡ್..!