ಕನ್ನಡಿಗರು ಯಾರಿಗೇನು ಕಮ್ಮಿ ಇಲ್ಲ. ಕನ್ನಡಿಗರು ಮನಸ್ಸು ಮಾಡಿದ್ರೆ ಯಾವ ರೆಕಾರ್ಡ್ ಬೇಕಾದ್ರು ಮಾಡ್ತಾರೆ, ಯಾವ ರೆಕಾರ್ಡ್ ಗಳನ್ನು ಬೇಕಾದ್ರು ಬ್ರೇಕ್ ಮಾಡ್ತಾರೆ.
ಈಗ ಇದು ಮತ್ತೆ ಪ್ರೂವ್ ಆಗಿದೆ. ಕನ್ನಡಿಗರು ರಾಜ್ ಮೌಳಿ ನಿರ್ದೇಶನದ ಟಾಲಿವುಡ್ ನ ಸೂಪರ್ ಹಿಟ್ ಮೂವಿ ‘ಬಾಹುಬಲಿ’ ರೆಕಾರ್ಡನ್ನು ಮುರಿದಿದ್ದಾರೆ.
ಹೌದು, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ , ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿರೋ ‘ದಿ ವಿಲನ್’ ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡಿದೆ.
ಶಿವಮೊಗ್ಗ , ಚಿಕ್ಕಮಗಳೂರು, ಮಂಗಳೂರು, ದಕ್ಷಿಣ ಕನ್ನಡದಲ್ಲಿ ಬಾಹುಬಲಿ ಫಸ್ಟ್ ಡೇ 34 ಲಕ್ಷ ರೂ ಕಲೆಕ್ಷನ್ ಮಾಡಿತ್ತು. ವಿಲನ್ ಬರೋಬ್ಬರಿ 48 ಲಕ್ಷ ರೂ ಗಳಿಸಿದೆ. ಒಟ್ಟಾರೆ ರಾಜ್ಯದಲ್ಲಿ ಕೇವಲ 5 ದಿನಗಳಲ್ಲಿ 50 ಕೋಟಿ ರೂ ಕಲೆಕ್ಷನ್ ಮಾಡಿರೋ ‘ದಿ ವಿಲನ್’ ಸ್ಯಾಂಡಲ್ ವುಡ್ ಹಿಸ್ಟರಿಯಲ್ಲೇ ಬಹುದೊಡ್ಡ ರೆಕಾರ್ಡ್ ಮಾಡಿದೆ. ಇದರೊಂದಿಗೆ ಕರ್ನಾಟಕದಲ್ಲಿ ‘ಬಾಹುಬಲಿ’ ರೆಕಾರ್ಡ್ ಪುಡಿಗಟ್ಟುವಲ್ಲಿ ಗೆದ್ದಿದೆ.
ಕರ್ನಾಟಕ ಅಲ್ದೆ ದೆಹಲಿ, ಚೆನ್ನೈ, ಮುಂಬೈ, ಹೈದರಾಬಾದ್, ಕೊಚ್ಚಿ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣ್ತಿದ್ದು ಮತ್ತಷ್ಟು ರೆಕಾರ್ಡ್ ಮಾಡೋದ್ರಲ್ಲಿ ನೋ ಡೌಟ್.