Friday, July 19, 2024

ವಿರಾಟ್, ರೋಹಿತ್ ಸೆಂಚುರಿ; ಟೀಂ ಇಂಡಿಯಾಕ್ಕೆ ಭರ್ಜರಿ ಜಯ

ಕ್ಯಾಪ್ಟನ್ ವಿರಾಟ್ ಕೊಹ್ಲಿ (140) ಮತ್ತು ರೋಹಿತ್ ಶರ್ಮಾ (ಅ.152) ರನ್ ಗಳ ಬಲದಿಂದ ಆತಿಥೇಯ ಟೀ ಇಂಡಿಯಾ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು.

ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫಸ್ಟ್ ಒನ್ ಡೇ ಮ್ಯಾಚ್ ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ನಿಗಧಿತ 50 ಓವರ್ ಗಳಲ್ಲಿ 8 ವಿಕೆಟ್ ಕಳ್ಕೊಂಡು 322 ರನ್ ಗಳಿಸಿತು. ವೆಸ್ಟ್ ಇಂಡೀಸ್ ಪರ ಶಿಮ್ರಾನ್ ಹೆಟ್ಮರ್ 106 , ಕಿರಾನ್ ಪಾಲ್ 51 ರನ್ ಗಳನ್ನು ಮಾಡಿದ್ರು.
ರನ್ ಚೇಸ್ ಮಾಡಿದ ಟೀ ಇಂಡಿಯಾ 42.1 ಓವರ್ ಗಳಲ್ಲಿ ಟಾರ್ಗೆಟ್ ತಲುಪಿ ಗೆಲುವಿನ ನಗೆ ಬೀರಿತು.
ರೋಹಿತ್ ಶರ್ಮಾ 117 ಬಾಲ್ ಗಳಲ್ಲಿ‌ 15 2 ರನ್ ಗಳಿಸಿ ಅಜೇಯರಾಗಿ ಉಳಿದ್ರು.‌ ಇವರ ಇನ್ನಿಂಗ್ಸ್ ನಲ್ಲಿ 15 ಬೌಂಡರಿ, 8 ಸಿಕ್ಸರ್ ಗಳಿದ್ದವು.
ಕ್ಯಾಪ್ಟನ್ ವಿರಾಟ್ ಕೊಹ್ಲಿ 21 ಬೌಂಡರಿ ಮತ್ತು 2 ಸಿಕ್ಸರ್ ಗಳ ನೆರವಿನಿಂದ 107 ಎಸೆತಗಳಲ್ಲಿ 140 ರನ್ ಗಳಿಸಿದ್ರು.‌ ಅಂಬಟಿ ರಾಯ್ಡು 22 ರನ್ ಮಾಡಿ ಅಜೇಯರಾಗಿ ಉಳಿದ್ರು. ಧವನ್ ಕೇವಲ 4 ರನ್ ಗಳಿಗೆ ತೃಪ್ತರಾದ್ರು.
ಈ ಮ್ಯಾಚ್ ನ ಗೆಲುವಿನೊಂದಿಗೆ ಇಂಡಿಯಾ 5 ಮ್ಯಾಚ್ ಗಳ ಒಡಿಐ ಟೂರ್ನಿಯಲ್ಲಿ 1-0 ಮುನ್ನಡೆ ಪಡೆದಿದೆ.

RELATED ARTICLES

Related Articles

TRENDING ARTICLES