Sunday, July 14, 2024

ಒನ್ ಡೇ ವಾರ್ ಗೆ ಪಂತ್ ಎಂಟ್ರಿ..! ಧೋನಿ ಸ್ಥಾನಕ್ಕೆ ಕಣ್ಣಿಟ್ಟಿರೋ ಯಂಗ್ ಪ್ಲೇಯರ್..!

ಒನ್ ಡೇ ಇಂಟರ್ ನ್ಯಾಷನಲ್ (ಒಡಿಐ) ಕ್ರಿಕೆಟ್ ಗೆ ರಿಷಬ್ ಪಂತ್ ಎಂಟ್ರಿ ಕೊಟ್ಟಿದ್ದಾರೆ. ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ವೆಸ್ಟ್ ಇಂಡೀಸ್ ವಿರುದ್ಧದ ಮ್ಯಾಚ್ ನಲ್ಲಿ ರಿಷಬ್ ಟೀಂ ಇಂಡಿಯಾ ಪರ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ.

ತಾವು ಆಡಿರೋ 5 ಟೆಸ್ಟ್ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ತಮ್ಮ ‘ಪವರ್’ ಸಾಬೀತುಪಡಿಸಿದ್ದಾರೆ.‌

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸಿಕ್ಸರ್ ಸಿಡಿಸಿ  ರೆಕಾರ್ಡ್ ಮಾಡಿದ್ದ ರಿಷಬ್ ಪಂತ್ ಕೇವಲ 5 ಮ್ಯಾಚ್ ಗಳಿಂದ ಅನೇಕ ರೆಕಾರ್ಡ್ ಗಳನ್ನ ತನ್ನ ಹೆಸ್ರಿಗೆ ಬರೆಸಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಕೆನ್ನಿಂಗ್ಟನ್ ಓವೆಲ್ ಟೆಸ್ಟ್ ಮ್ಯಾಚ್ ನಲ್ಲಿ ಸೆಂಚುರಿ ಬಾರಿಸಿ ದಾಖಲೆ ಬರೆದಿದ್ರು. ಅದು ಅವರ ಫಸ್ಟ್ ಇಂಟರ್ ನ್ಯಾಷನಲ್ ಟೆಸ್ಟ್ ಸೆಂಚುರಿ. ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾದ ಯಾವ ವಿಕೆಟ್ ಕೀಪರ್ ಕೂಡ ಇಷ್ಟು ವರ್ಷ ಶತಕ ಸಿಡಿಸಿರ್ಲಿಲ್ಲ. ಆ ರೆಕಾರ್ಡ್ ಅನ್ನು ಯಂಗ್ ಸ್ಟರ್ ಪಂತ್ ಮಾಡಿದ್ರು.

ವೆಸ್ಟ್ ಇಂಡೀಸ್ ವಿರುದ್ಧ ಹೈದರಾಬಾದ್ ಟೆಸ್ಟ್ ಮ್ಯಾಚ್ ನಲ್ಲಿ 92 ರನ್ ಗಳಿಸಿದ್ದ ಪಂತ್ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ರೆಕಾರ್ಡ್ ಬ್ರೇಕ್ ಮಾಡಿದ್ರು. ಮೊದಲ 5 ಟೆಸ್ಟ್ ಮ್ಯಾಚ್ ನಲ್ಲಿ ಮಾಹಿ 297 ರನ್ ಗಳಿಸಿದ್ರು.  ಪಂತ್ ತಮ್ಮ ಫಸ್ಟ್ 5 ಟೆಸ್ಟ್ ಮ್ಯಾಚ್ ಗಳಿಂದ 346 ರನ್ ಮಾಡಿ ರೆಕಾರ್ಡ್ ಕ್ರಿಯೇಟ್ ಮಾಡಿದ್ರು.

ಇದೀಗ ಇಂದಿನಿಂದ ಒನ್ ಡೇ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಂತ್ರ ಟೀಂ ಇಂಡಿಯಾದಲ್ಲಿ‌ ಪರ್ಮನೆಂಟ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಲು ಪಂತ್ ರೆಡಿಯಾಗ್ತಿದ್ದಾರೆ.‌

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡ್ಕೊಂಡಿದೆ. ರಿಷಬ್ ಬ್ಯಾಟಿಂಗ್ ನಲ್ಲಿ ಘರ್ಜಿಸೋಕೆ ರೆಡಿಯಾಗಿದ್ದಾರೆ. ಇಂದಿನ ಮ್ಯಾಚ್ ನಲ್ಲಿ ಪಂತ್ ಹೇಗೆ ಆಡ್ತಾರೆ ಅನ್ನೋದನ್ನು ಕಾದು ನೋಡೋಣ.

RELATED ARTICLES

Related Articles

TRENDING ARTICLES