Wednesday, April 24, 2024

ಸುದೀಪ್ ಭಾವಚಿತ್ರಕ್ಕೆ ರಕ್ತದ ಅಭಿಷೇಕ..!

ಅಭಿಮಾನಿಗಳು ತಮ್ಮ ಅಭಿಮಾನವನ್ನು  ಹೇಗೆಲ್ಲಾ ವ್ಯಕ್ತಪಡಿಸ್ತಾರೆ ಅಂತ ಹೇಳೋಕೆ ಸಾದ್ಯನೇ ಇಲ್ಲ.‌ ಫ್ಯಾನ್ಸ್ ಪಾಲಿಗೆ ತಮ್ಮ ನೆಚ್ಚಿನ ನಟ ದೇವರು!

ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾದಾಗ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸೋದು ಕಾಮನ್. ಆದ್ರೆ , ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳು ಬಾರಿ ಹಾಲಿನ ಬದಲು ರಕ್ತದ ಅಭಿಷೇಕ ಮಾಡಿದ್ದಾರೆ!?

ಹೀಗೆ ಸುದೀಪ್ ಭಾವಚಿತ್ರಕ್ಕೆ ರಕ್ತಧಾರೆ ಎರೆದವರು ದಾವಣಗೆರೆಯ ಜಗಳೂರು ಫ್ಯಾನ್ಸ್! ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ‘ದಿ ವಿಲನ್’ ಸಿನಿಮಾ ಬಿಡುಗಡೆ ದಿನ ಥಿಯೇಟರ್ ಎದುರೇ ಸುದೀಪ್ ಭಾವಚಿತ್ರಕ್ಕೆ ಕುರಿ ಬಲಿ ಕೊಟ್ಟು ರಕ್ತದ ಅಭಿಷೇಕ ಮಾಡಿದ್ದಾರೆ ಎನ್ನಲಾಗಿದೆ‌. ಆದ್ರೆ ಯಾರೂ ಕುರಿ ಬಲಿ ಕೊಟ್ಟಿಲ್ಲ ಅಂತ ಥಿಯೇಟರ್ ಮಾಲೀಕರು ಹೇಳ್ತಿದ್ದಾರೆ.

RELATED ARTICLES

Related Articles

TRENDING ARTICLES