Friday, July 19, 2024

ಮಂಗಗಳಿಂದ ಮರ್ಡರ್; ಮೃತನ ಫ್ಯಾಮಿಲಿಯಿಂದ ಕೋತಿಗಳ ವಿರುದ್ಧ ಕಂಪ್ಲೇಂಟ್..!

ನಾವು-ನೀವು ಎಂಥೆಂಥಾ ಭಯಾನಕ ಮರ್ಡರ್ ಗಳನ್ನು ನೋಡಿದ್ದೀವಿ, ಕೇಳಿದ್ದೀವಿ. ಆದ್ರೆ, ನಿಜಕ್ಕೂ ನಾವ್ಯಾರೂ ಇಂಥಾ ಕೊಲೆಯನ್ನು ನೋಡೇ ಇರ್ಲಿಲ್ಲ..!  ಇದು ಅಂತಿಂಥಾ ಕ್ರೈಂ ಸ್ಟೋರಿಯಲ್ಲ. ಕಿಲ್ಲರ್ ಕಪಿಗಳ ಸ್ಟೋರಿ.

ಯಸ್, ಆಶ್ಚರ್ಯ  ಆದ್ರೂ ಇದು ಸತ್ಯ.  ಉತ್ತರಪ್ರದೇಶದಲ್ಲಿ ಮಂಗಗಳು ವೃದ್ಧನನ್ನು ಕೊಂದಿವೆ. ಬಾಘವತ್ ಟಿಕ್ರಿ ಅನ್ನೋ ಗ್ರಾಮದ 72 ವರ್ಷದ ಧರ್ಮಪಾಲ್ ಸಿಂಗ್ ಕಪಿಗಳಿಂದ ಕೊಲೆಯಾದವ್ರು.

ಧರ್ಮಪಾಲ್ ಕಟ್ಟಿಗೆ ತರೋಕೆ ಅಂತ ಹೋಗಿದ್ದಾಗ ಮಂಗಗಳು ಇವ್ರ ಮೇಲೆ ಇಟ್ಟಿಗೆ ತುಂಡುಗಳನ್ನು ಎಸೆದಿವೆ. ಇದ್ರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ರು. ಕೂಡಲೇ ಆಸ್ಪತ್ರೆಗೆ ಸೇರಿಸಲಾಯ್ತು. ಆದ್ರೆ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಪೊಲೀಸರು ಆಕಸ್ಮಿಕ ಪ್ರಕರಣ ಅಂತ ದಾಖಲಿಸಿಕೊಂಡಿದ್ರು. ಆದ್ರೆ, ಮೃತ ಧರ್ಮಪಾಲ್ ಫ್ಯಾಮಿಲಿ ಆರೋಪಿ ಕಪಿಗಳ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ.

ಈ ಕೋತಿಗಳು ಹೆಚ್ಚು-ಕಮ್ಮಿ 15-20 ಇಟ್ಟಿಗೆ ತುಂಡುಗಳನ್ನು ಧರ್ಮಪಾಲ್ ಮೇಲೆ ಎಸೆದಿವೆ. ಅವ್ರ ತಲೆ, ಕಾಲು, ಎದೆ ಭಾಗಕ್ಕೆ ಪೆಟ್ಟಾಗಿ ಸಾವನ್ನಪ್ಪಿದ್ದಾರೆ ಅಂತ ಹೇಳಿರೋ ಸಹೋದರ ಕೃಷ್ಣಪಾಲ್, ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES