ಬಾಳೆಹಣ್ಣು ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಆಂಟಿಆಕ್ಸಿಡೆಂಟ್ಗಳಿವೆ ಹಾಗೂ ಇದು ಹೃದಯದ ಆರೋಗ್ಯಕ್ಕೆ ಉತ್ತೇಜನ ನೀಡುತ್ತದೆ. ಬಾಳ ಹಣ್ಣು ತುಂಬಾ ಹೊತ್ತಿನ ತನಕ ಹೊಟ್ಟೆ ತುಂಬಿದ ಅನುಭವವನ್ನು ಪಡೆಯುವುದಕ್ಕೂ ನೆರವಾಗುತ್ತದೆ
ಮಾವು ರುಚಿಕರ ಮಾವಿನ ಆರೋಗ್ಯ ಪ್ರಯೋಜನಗಳು ಹಲವು. ಇದು ಹೃದಯದ ಆರೋಗ್ಯವನ್ನು ಉತ್ತಮವಾಗಿಸಲು ನೆರವಾಗುತ್ತದೆ. ಉತ್ತಮ ಜೀರ್ಣಕ್ರಿಯೆ ಹಾಗೂ ಕಣ್ಣಿನ ಆರೋಗ್ಯ ವೃದ್ಧಿಗೂ ಇದು ಸಹಾಯ ಮಾಡುತ್ತದೆ
ಸೇಬು ಆಪಲ್ನ ಆರೋಗ್ಯಕರ ಅಂಶದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದು ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಉತ್ತಮವಾಗಿಸುವುದಕ್ಕೂ ಇದು ಸಹಾಯಕ. ರಕ್ತಹೀನತೆಯನ್ನು ದೂರ ಮಾಡುವುದಕ್ಕೂ ಆಪಲ್ ನೆರವಾಗುತ್ತದೆ
ಬೆರ್ರಿ ಹಣ್ಣುಗಳು ಸ್ಟ್ರಾಬೆರ್ರಿ, ಬ್ಲೂಬೆರ್ರಿಯಂತಹ ಹಣ್ಣುಗಳನ್ನೂ ನಿತ್ಯ ಸೇವಿಸುವುದು ಒಳ್ಳೆಯದು. ಇದರಿಂದ ಸಾಕಷ್ಟು ಉತ್ತಮಾಂಶಗಳನ್ನು ಪಡೆಯಬಹುದು. ಹೃದಯ ಸೇರಿದಂತೆ ದೇಹದ ವಿವಿಧ ಅಂಗಾಂಗಗಳ ಆರೋಗ್ಯ ವೃದ್ಧಿಗೂ ಇದು ನೆರವಾಗುತ್ತದೆ
ಕಲ್ಲಂಗಡಿ ರಸಭರಿತ ಕಲ್ಲಂಗಡಿ ಹಣ್ಣಿನಿಂದಲೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಹೃದಯದ ಆರೋಗ್ಯಕ್ಕೂ ಇದು ಉತ್ತಮ