Friday, May 3, 2024

ಅನೈತಿಕ ಚಟುವಟಿಕೆಗಳ ತಾಣವಾದ ಜಯನಗರ ಕಾಂಪ್ಲೆಕ್ಸ್..!

ಬೆಂಗಳೂರು : ಅಲ್ಲಲ್ಲಿ ರಾಶಿ ರಾಶಿಯಾಗಿ ಬಿದ್ದಿರೋ ಕಸ, ಕಡ್ಡಿ, ರಾತ್ರಿ ವೇಳೆ ಕುಡಿದು ಬಿಸಾಡಿರುವ ಬಿಯರ್ ಬಾಟಲ್ ಗಳು. ರಾತ್ರಿ ಇಡೀ ಓಪನ್ ಆಗಿರೋ ಕಾಂಪ್ಲೆಕ್ಸ್ ಹೌದು, ಇದು ಒಂದು ಕಾಲದಲ್ಲಿ ಪ್ರತಿಷ್ಠಿತವಾಗಿದ್ದ ಕಾಂಪ್ಲೆಸ್, ಈಗ ಪಾಳು ಬಿದ್ದಿದೆ. ಹೊಸ ಕಾಂಪ್ಲೆಕ್ಸ್ ನಿರ್ಮಿಸೋದಾಗಿ ಸರ್ಕಾರ ಹೇಳಿ 4 ವರ್ಷಗಳೇ ಕಳೆದಿವೆ. ಆದ್ರೆ, ಇನ್ನೂ ಯಾವುದೇ ಕಾಮಗಾರಿ ಶುರು ಮಾಡಿಲ್ಲ. ಹೀಗಾಗಿ ಇದು ಈಗ ಸಂಜೆಯಾಗುತ್ತಿದ್ದಂತೆ ಕುಡುಕರ ಅಡ್ಡ ಆಗುತ್ತಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ .

ಇನ್ನು ಹೊಸ ಕಾಂಪ್ಲೆಕ್ಸ್ ಈಗಾಗಲೇ ವ್ಯಾಪಾರಸ್ಥರಿಂದ ತುಂಬಿದೆ. ಹೀಗಾಗಿ ಹಳೆ ಕಾಂಪ್ಲೆಕ್ಸ್ ಮರುನಿರ್ಮಾಣದ ಅಗತ್ಯತೆ ಹೆಚ್ಚಿದೆ. ಸದ್ಯ ಅವ್ಯವಸ್ಥೆಯ ಸ್ಥಳವಾಗಿರುವ ಈ ಕಾಂಪ್ಲೆಕ್ಸ್ ಯಾವುದೇ ರಕ್ಷಣೆ ಇಲ್ಲದೆ ಇರೋದರಿಂದ ಕತ್ತಲಾದ್ರೆ ಸಾಕು, ಕುಡುಕ, ಕಾಮುಕರ ಕರಾಳ ದಂಧೆ ಇಲ್ಲಿ ಎಗ್ಗಿಲ್ಲದೆ ನಡೆಯುತ್ತಂತೆ.

ಇನ್ನು ಇದನ್ನು ಅಭಿವೃದ್ಧಿಪಡಿಸುವಂತೆ ಸಾರ್ವಜನಿಕರು ಪಾಲಿಕೆಗೆ ಸಾಕಷ್ಟು ಬಾರಿ ಪತ್ರ ಬರೆದ್ರೂ ಪ್ರಯೋಜನವಾಗಲಿಲ್ಲವಂತೆ. ಇನ್ನೂ ಇಲ್ಲಿನ ಕಾಪೋರೇಟರ್‌ಗಳು, ಶಾಸಕರು ಸರ್ಕಾರದಿಂದ ಬಿಲ್ ಮಾಡಿಸಿಕೊಂಡು ಯಾವುದೇ ಕೆಲಸ ಮಾಡುತ್ತಿಲ್ಲ ಅಂತ ಇಲ್ಲಿನ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇನ್ನು ಕಾಂಪ್ಲೆಕ್ಸ್‌ನಲ್ಲಿ ದೊಡ್ದ ದೊಡ್ಡ ಬಿಲಗಳು ಬಾಯಿ ತೆರೆದಿದ್ದ ಹಾವು, ಇಲಿ, ಹೆಗ್ಗಣಗಳ ವಾಸ ಸ್ಥಳವಾಗಿದೆ. ಇನ್ನು ರಾತ್ರಿ ವೇಳೆ ಇಲ್ಲಿನ ವಿದ್ಯುತ್ ದೀಪಗಳು ಉರಿಯುವುದನ್ನೇ ಮರೆತು ಬಿಟ್ಟಿವೆಯಂತೆ. ಇನ್ನು ಬೀದಿ ನಾಯಿಗಳು ಕೂಡ ಬಿಡಾರ ಹೂಡಿವೆ.

ಒಟ್ಟಾರೆ ಜಯನಗರ ಕಾಂಪ್ಲೆಕ್ಸ್ ಪುಂಡಪೋಕರಿಗಳ ಬಿಡಾರವಾಗಿರುವುದಂತೂ ಸತ್ಯ.ಅದೇನೆ ಆಗ್ಲಿ ಇನ್ನಾದ್ರೂ ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಕ್ರಮ ಕೈಗೊಳ್ಳುವರಾ ಅಂತಾ ಕಾದು ನೋಡಬೇಕಾಗಿದೆ.

RELATED ARTICLES

Related Articles

TRENDING ARTICLES